ರಾಜಕಾರಣಿಗಳು ಏನು ಬೇಕಾದರೂ ಮಾತನಾಡಬಲ್ಲರು. ಆದರೆ, ಯಾವುದಾದರೂ ವಿಚಾರ ತಮ್ಮ ವೋಟ್‍ಬ್ಯಾಂಕ್‍ಗೆ ಏಟು ಕೊಡುತ್ತೆ ಎಂದು ಸ್ವಲ್ಪ ಗೊತ್ತಾದರೂ ಸಾಕು, ಗಪ್‍ಚುಪ್ ಆಗಿಬಿಡುತ್ತಾರೆ. ಹಾಗೆ ಕೆಲವು ರಾಜಕಾರಣಿಗಳು ಸೈಲೆಂಟ್ ಆಗಿ ಕೂರುವ ವಿಚಾರಗಳಲ್ಲಿ ಒಂದು ಅಕ್ರಮ ವಲಸಿಗರ ವಿಚಾರ.
ಭಾರತಕ್ಕೆ ಹಲವು ದೇಶಗಳಿಂದ, ಅದರಲ್ಲೂ ವಿಶೇಷವಾಗಿ ಬಾಂಗ್ಲಾದೇಶದಿಂದ ಬರುತ್ತಿರುವ ವಲಸಿಗರು ಬರುತ್ತಿರುವುದು ಹೊಸದೇನಲ್ಲ. ಆದರೆ, ಅದೀಗ ಸಮಸ್ಯೆಯೇ ಆಗಿ ಹೋಗಿವೆ. ಹಾಗೆ ಬಂದ ವಲಸಿಗರು, ಅತ್ಯಂತ ಸುಲಭವಾಗಿ ಮತಪತ್ರ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್‍ಗಳನ್ನೆಲ್ಲ ಪಡೆದುಕೊಳ್ಳುತ್ತಿದ್ದಾರೆ. ಮಾಸ್ ಲೀಡರ್ ಆ ವಿಚಾರದ ಬಗ್ಗೆ ಧ್ವನಿಯೆತ್ತಲಿದೆ.
ಇಂತಹ ಕಥೆಯನ್ನು ಹೇಳೋಕೆ ಒಬ್ಬ ಸ್ಟ್ರಾಂಗ್ ನಟ ಬೇಕಿತ್ತು. ಹೀಗಾಗಿಯೇ ಆ ಪಾತ್ರಕ್ಕೆ ಶಿವರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಶಿವರಾಜ್ ಕುಮಾರ್. ಒಂದು ಗಟ್ಟಿ ಸಂದೇಶ ಹೇಳುವ ಚಿತ್ರದ ನಾಯಕ ಕೂಡಾ, ತೂಕದ ವ್ಯಕ್ತಿತ್ವ ಹೊಂದಿರಬೇಕು ಎಂದು ಬಯಸುವುದು ಸಹಜವಲ್ಲವೇ..?
ಭಾರತದಲ್ಲಿ ಬೇರು ಬಿಟ್ಟಿರುವ 5 ಕೋಟಿಗೂ ಹೆಚ್ಚು ಬಾಂಗ್ಲಾ ವಲಸಿಗರು, ಅವರಿಂದಾಗಿ ಸೃಷ್ಟಿಯಾಗುತ್ತಿರುವ ಮಾದಕ ದ್ರವ್ಯ, ಕೋಟಾನೋಟು ಜಾಲ, ಭಯೋತ್ಪಾದನೆ.. ಈ ಎಲ್ಲ ವಿಚಾರಗಳ ಬಗ್ಗೆಯೂ ಚಿತ್ರದಲ್ಲೊಂದು ಸಂದೇಶವಿದೆ.