ವರಮಹಾಲಕ್ಷ್ಮಿ ಹಬ್ಬ ಕನ್ನಡ ಚಿತ್ರರಂಗಕ್ಕೆ ಶುಭ ತಂದಿರುವುದೇ ಹೆಚ್ಚು. ಅದರಲ್ಲಿಯಂತೂ ಈ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆ ಕಾಣುತ್ತಿರುವ ರಾಜ್ ವಿಷ್ಣು ಚಿತ್ರ, ಆಪ್ತಮಿತ್ರ ಮತ್ತು ಜೋಗಿ ಚಿತ್ರಗಳ ನೆನಪಿನ ಗುಂಗಿನಲ್ಲಿದೆ.
ಅದಕ್ಕೆ ಕಾರಣ ಇಷ್ಟೆ. ಆ ಎರಡೂ ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದಂದೇ ರಿಲೀಸ್ ಆಗಿದ್ದವು. ಸೂಪರ್ ಹಿಟ್ ಆಗಿದ್ದವು. ಈಗ ರಾಜ್ ವಿಷ್ಣು ಕೂಡಾ ಹಬ್ಬದ ದಿನವೇ ತೆರೆಕಾಣುತ್ತಿದೆ. ಶರಣ್, ಚಿಕ್ಕಣ್ಣ ಅಭಿನಯದ ಈ ಕಾಮಿಡಿ ಚಿತ್ರ ಈಗಾಗಲೇ ಕ್ರೇಝ್ ಸೃಷ್ಟಿಸಿದೆ. ರಾಮು ನಿರ್ಮಾಣದ ರಾಜ್ ವಿಷ್ಣು ಕೂಡಾ ಜೋಗಿ, ಆಪ್ತಮಿತ್ರದ ಹಾಗೆ ಸೂಪರ್ ಹಿಟ್ ಆಗುತ್ತಾ..? ಅಭಿಮಾನಿಗಳ ನಿರೀಕ್ಷೆಯಂತೂ ಹಾಗೇ ಇದೆ.