ಶರಣ್ ಚಿತ್ರಗಳು ಸೂಪರ್ ಹಿಟ್ ಆಗಿವೆ. ಆವರೇಜ್ ಲೆವೆಲ್‍ನಲ್ಲಿ ಗೆದ್ದಿವೆ. ಫ್ಲಾಪ್ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಶರಣ್ ಚಿತ್ರಗಳಿಗೆ ಹೋದರೆ ಆರಾಮವಾಗಿ ನಕ್ಕು ಬರಬಹುದು ಎಂಬ ನಿರೀಕ್ಷೆ ಪ್ರೇಕ್ಷಕರದ್ದು. ಹೀಗಿದ್ದರೂ ಶರಣ್ ನಾಯಕತ್ವದ ಯಾವ ಚಿತ್ರಕ್ಕೂ, ರಾಜ್ ವಿಷ್ಣು ಚಿತ್ರಕ್ಕೆ ಸಿಗುತ್ತಿರುವಂತದ ದೊಡ್ಡ ಮಟ್ಟದ ಹೈಪ್ ಸಿಕ್ಕಿರಲಿಲ್ಲ.
ರಾಜ್ ವಿಷ್ಣು ಚಿತ್ರ ಏಕಕಾಲದಲ್ಲಿ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಶರಣ್ ಚಿತ್ರಜೀವನದಲ್ಲಿಯೇ ಇದು ಅತಿದೊಡ್ಡ ಮಟ್ಟದಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿರುವ ಚಿತ್ರ. ಕೋಟಿ ರಾಮು ಎಂದೇ ಫೇಮಸ್ ಆಗಿರುವ ರಾಮು ಬ್ಯಾನರ್‍ನ 37ನೇ ಚಿತ್ರ ರಾಜ್ ವಿಷ್ಣು.
ದುಡ್ಡು ಕೊಟ್ಟು ಬರುವ ಯಾವೊಬ್ಬ ಪ್ರೇಕ್ಷಕನಿಗೂ ಮೋಸವಾಗಲ್ಲ. ಎರಡು ಗಂಟೆ ಕಾಲ ನಗಬಹುದು. ಬಾಂಧವ್ಯಗಳ ಕಥೆಯನ್ನೂ ನೋಡಬಹುದು ಎಂದಿದ್ದಾರೆ ರಾಮು.
3 ವರ್ಷಗಳ ನಂತರ ಮತ್ತೆ ಜೊತೆಯಾಗಿರುವ ಶರಣ್-ಚಿಕ್ಕಣ್ಣ ಕಾಂಬಿನೇಷನ್, ಅವರಿಬ್ಬರ ನಗೆಯೂಟದ ಮಧ್ಯೆ ಉಪ್ಪಿನಕಾಯಿಯಂತೆ ಕಾಣುತ್ತಿರುವ ಸಾಧುಕೋಕಿಲ, ಹಿಟ್ ಆಗಿರುವ ಹಾಡುಗಳು.. ಎಲ್ಲವೂ ನಿರೀಕ್ಷೆಯನ್ನು ಭರ್ಜರಿಯಾಗಿಯೇ ಹೆಚ್ಚಿಸಿವೆ.