ಉಪೇಂದ್ರ ಅವರ ಹೊಸ ಚಿತ್ರ ಹೋಮ್ ಮಿನಿಸ್ಟರ್‍ಗೆ ನಾಯಕಿಯಾಗಿ ವೇದಿಕಾ ಆಯ್ಕೆಯಾಗಿದ್ದಾರೆ. ಸಂಗಮ, ಶಿವಲಿಂಗ ನಂತರ ವೇದಿಕಾ ನಟಿಸುತ್ತಿರುವ ಇನ್ನೊಂದು ಚಿತ್ರ ಹೋಮ್ ಮಿನಿಸ್ಟರ್.
ಚಿತ್ರದ ನಿರ್ದೇಶಕ ಯಾರು ಎಂಬುದು ಕೂಡಾ ಸಸ್ಪೆನ್ಸ್ ಆಗಿಯೇ ಇತ್ತು. ಚಿತ್ರದ ಡೈರೆಕ್ಟರ್ ಶ್ರೀಹರಿ. ಶ್ರೀಹರಿ, ಕನ್ನಡಕ್ಕೆ ಹೊಸಬರಾದರೂ, ತೆಲುಗಿನಲ್ಲಿ ಸ್ಟಾರ್ ಕಥೆಗಾರ. ಮಹೇಶ್ ಬಾಬು ನಟಿಸುತ್ತಿರುವ `ಭರತ್ ಆನೆ ನೇನು' ಚಿತ್ರದ ಕಥೆ ಇವರದ್ದೇ. ಮಹೇಶ್ ಬಾಬು ಅವರ ಮುಂದಿನ ಚಿತ್ರದ ಡೈರೆಕ್ಟರ್ ಆಗಿ ಫಿಕ್ಸ್ ಆಗಿರುವ ಶ್ರೀಹರಿ, ಕನ್ನಡದಲ್ಲಿ ನಿರ್ದೇಶಕರಾಗಿ ಪ್ರಥಮ ಪ್ರಯೋಗಕ್ಕಿಳಿದಿದ್ಧಾರೆ.
ಚಿತ್ರದ ಸಂಗೀತ ನಿರ್ದೇಶಕ ಮಹಮದ್ ಗಿಬ್ರಾನ್. ಕಮಲ್ ಹಾಸನ್ ಅವರ ವಿಶ್ವರೂಪಂ-2 ಚಿತ್ರಕ್ಕೆ ಸಂಗಿತ ನೀಡಿರುವ ನಿರ್ದೇಶಕ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.
Related Articles :-