ಕಿವುಡ ಮತ್ತು ಮೂಗನಾಗಿದ್ದರೂ, ತೆರೆಯಲ್ಲಿ ಅದು ಕಾಣದಷ್ಟು ಸೊಗಸಾಗಿ ನಟಿಸುತ್ತಿದ್ದ ಧೃವ ಶರ್ಮಾಗೆ ಚಿತ್ರರಂಗದಲ್ಲಿ ದೊಡ್ಡ ಹಿಟ್ ಎನ್ನುವುದು ಸಿಕ್ಕಿರಲಿಲ್ಲ. ಆದರೆ, ಸಿಸಿಎಲ್ನಲ್ಲಿ ಭರ್ಜರಿಯಾಗಿ ಆಡುತ್ತಿದ್ದ ಧೃವ ಶರ್ಮಾ ಬಾಲಿವುಡ್ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿಯೇ ಬಾಲಿವುಡ್ನ ಹಲವು ಸೆಲಬ್ರಿಟಿಗಳ ಪರಿಚಯವಾಗಿತ್ತು.
ಹೀಗೆ ಸಿಸಿಎಲ್ನಲ್ಲಿ ಧೃವ ಶರ್ಮಾ ಪ್ರತಿಭೆಗೆ ಮಾರು ಹೋಗಿದ್ದ ಬಾಲಿವುಡ್ ತಾರೆಯರಿಗೂ ಧೃವ ಶರ್ಮಾ ನಿಧನ ಆಘಾತ ನೀಡಿದೆ. ಟ್ವಿಟರ್ ಮೂಲಕ ಬಾಲಿವುಡ್ ತಾರೆಯರು, ಧೃವ ಶರ್ಮಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಮಲತಾ ಅಂಬರೀಷ್, ಪ್ರಿಯಾಮಣಿ, ರಿತೇಶ್ ದೇಶ್ಮುಖ್, ಅಫ್ತಾಬ್ ಶಿವದಾಸನಿ, ನಿಖೇಶಾ ಪಟೇಲ್, ಡ್ಯಾನಿಶ್ ಸೇಠ್ ಮೊದಲಾದವರು ಧೃವ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Related Articles :-
ಧೃವ ಶರ್ಮಾ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗ
ನಟ ಧೃವ ಶರ್ಮಾ ಸಾವು ಸಹಜ ಸಾವಲ್ಲ. ಆತ್ಮಹತ್ಯೆ..?