` ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar, darshan
Shivarajkumar, Darshan Image

ದರ್ಶನ್ ಅಭಿನಯದ 50ನೇ ಚಿತ್ರ, ಸೆಟ್ಟೇರುವ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ. ದರ್ಶನ್ ಅಭಿನಯದ 50ನೇ ಚಿತ್ರ ಎಂಬುದಷ್ಟೇ ಕಾರಣವಲ್ಲ, ಕನ್ನಡದಲ್ಲಿ ಪೌರಾಣಿಕ ಚಿತ್ರವೊಂದು ಎಷ್ಟೋ ವರ್ಷಗಳ ನಂತರ ದೊಡ್ಡ ಮಟ್ಟದಲ್ಲಿ ಸೆಟ್ಟೇರುತ್ತಿರುವುದು ಕೂಡಾ ಕುತೂಹಲಕ್ಕೆ ಕಾರಣ. ಚಿತ್ರದಲ್ಲಿ ದರ್ಶನ್ ದುರ್ಯೋಧನನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಬೇಕಿತ್ತು. ಆದರೆ, ನಟಿಸುತ್ತಿಲ್ಲ. ಆಫರ್​ನ್ನು ನಿರಾಕರಿಸಿರುವ ಶಿವಣ್ಣ, ಅದಕ್ಕೆ ಕಾರಣಗಳನ್ನೂ ಕೊಟ್ಟಿದ್ದಾರೆ. ಕುರುಕ್ಷೇತ್ರದ ಸಂಪೂರ್ಣ ವಿವರವನ್ನು ಹೇಳಿಕೊಂಡಿದ್ದಾರೆ.

ಅರ್ಜುನನ ಪಾತ್ರವಲ್ಲ, ಕರ್ಣನ ಪಾತ್ರಕ್ಕೆ ಆಫರ್

ಎಲ್ಲರೂ ಅಂದುಕೊಂಡಿದ್ದಂತೆ ಶಿವರಾಜ್​ ಕುಮಾರ್​ಗೆ ಬಂದಿದ್ದದ್ದು ಅರ್ಜುನನ ಪಾತ್ರವಲ್ಲ. ಕರ್ಣನ ಪಾತ್ರವಲ್ಲ. ಕರ್ಣ ಮತ್ತು ದುರ್ಯೋಧನರ ಸ್ನೇಹದ ಬಗ್ಗೆ ಮಹಾಭಾರತದಲ್ಲಿ ಅದ್ಭುತ ಕಥೆಯಿದೆ. 

ಡೇಟ್ ಸಮಸ್ಯೆ

ಬಹುಶಃ ಕನ್ನಡದಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟರೆಂದರೆ, ಅದು ಶಿವರಾಜ್ ಕುಮಾರ್ ಮಾತ್ರ. ಸದ್ಯಕ್ಕೆ "ದಿ ವಿಲನ್‌', "ಟಗರು' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮಾಸ್ ಲೀಡರ್ ಬಿಡುಗಡೆ ಹಂತದಲ್ಲಿದೆ. ಕೈಯಲ್ಲಿ 10ಕ್ಕೂ ಹೆಚ್ಚು ಚಿತ್ರಗಳಿವೆ. ಅಷ್ಟು ಚಿತ್ರಗಳ ಮಧ್ಯೆ ಕುರುಕ್ಷೇತ್ರಕ್ಕೆ ಡೇಟ್ಸ್ ಹೊಂದಾಣಿಕೆ ಸಾಧ್ಯವಾಗಿಲ್ಲ

ತೂಕದ ಸಮಸ್ಯೆ

ಎಲ್ಲರಿಗೂ ಗೊತ್ತಿರುವಂತೆ ಕರ್ಣ ಮಹಾರಥಿ ಯೋಧ. ಅಪ್ರತಿಮ ವೀರ. ಆ ಪಾತ್ರಕ್ಕೆ ಅಭಿನಯದಷ್ಟೇ ದೇಹದಾರ್ಢ್ಯತೆಯೂ ಮುಖ್ಯ. ಶಿವರಾಜ್ ಕುಮಾರ್ ನೋಡಿದರೆ ಸ್ಲಿಮ್ & ಸ್ಮಾರ್ಟ್. ಕರ್ಣನ ಪಾತ್ರಕ್ಕೆ ಏನಿಲ್ಲವೆಂದರೂ 5 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. 67 ಕೆಜಿ ತೂಕವಿರುವ ಶಿವಣ್ಣ, 72 ಕೆಜಿಗೆ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಈಗಿನ ಸ್ಥಿತಿಯಲ್ಲಿ ಅದು ಅಸಾಧ್ಯ ಎಂದು ಹೇಳಿದ್ದಾರೆ ಶಿವರಾಜ್​ ಕುಮಾರ್.

ಯಾವ ವೈರತ್ವವೂ ಇಲ್ಲ

ದರ್ಶನ್‌ ಜೊತೆಗೆ ನಟಿಸಬೇಕು ಎಂಬ ಕಾರಣಕ್ಕೆ ಸಿನಿಮಾ ಬಿಡಲಿಲ್ಲ. ನಿಜ ಹೇಳಬೇಕೆಂದರೆ, ಕರ್ಣನ ಪಾತ್ರವನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಮಹಾಭಾರತದಲ್ಲಿ ಕರ್ಣ, ದುರ್ಯೋಧನರ ಮಧ್ಯೆ ಎಂತಹ ಸ್ನೇಹವಿತ್ತೋ ಅಂಥದ್ದೇ ಸ್ನೇಹ ನಮ್ಮಿಬ್ಬರ ಮಧ್ಯೆ ಈಗಲೂ ಇದೆ. ದರ್ಶನ್​ರನ್ನು ಚಿಕ್ಕ ಹುಡುಗನಾಗಿದ್ದಾಗಿನಿಂದ ನೋಡಿದ್ದೇನೆ. ನಾವಿಬ್ಬರೂ ಈಗಲೂ ಸ್ನೇಹಿತರು.

ದರ್ಶನ್ ಅದ್ಭುತವಾಗಿ ನಟಿಸುತ್ತಾರೆ

ಅದು ನನ್ನ ನಂಬಿಕೆ. ದರ್ಶನ್‌ ಅವರ ಜೀನ್ಸ್‌ನಲ್ಲೇ ಆ ಶಕ್ತಿಯಿದೆ. ದುರ್ಯೋಧನನ ಪಾತ್ರವನ್ನು ದರ್ಶನ್‌ ಅದ್ಭುತವಾಗಿ ನಿರ್ವಹಿಸುತ್ತಾರೆ ಎಂಬ ನಂಬಿಕೆ ನನ್ನದು. ದರ್ಶನ್ ಕೆಪ್ಯಾಸಿಟಿಗೆ ಆ ತರಹದ ಪಾತ್ರಗಳು ಅತ್ಯಂತ ಸುಲಭ ಎಂದಿದ್ದಾರೆ ಶಿವಣ್ಣ. ಕುರುಕ್ಷೇತ್ರ ಚಿತ್ರ ಅದ್ಭುತವಾಗಿ ಮೂಡಿಬರಲಿ ಎಂದು ಶುಭ ಹಾರೈಸಿದ್ದಾರೆ.

Actor Shivarajakumar who is back from London after acting in 'The Villain', says that he couldn't act in 'Kurukshetra' because of date clash and he is missing the role of Karna very much.

'I was offered the role of Karna in the movie, but I couldn't act in the film because of date clash. I have given the dates for 'The Villain' and 'Tagaru'. Moreover, I had to increase my weight, which I cannot do now. Firstly, I need some time to gain my weight and if I increase my weight, then I would become a problem from other films' said Shivarajakumar.

Shivarajakumar said his decision to opt out of the film has nothing to do with Darshan. 'I and Darshan are very good friends and I know him from many years. Our friendship is like of Duryodhana and Karna's and I am very much missing an opportunity to act with him' said Shivarajakumar.