ಉಪೇಂದ್ರ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿಯ ನಡುವೆಯೇ ಉಪ್ಪಿ ಇನ್ನೊಂದು ಹೊಸ ಚಿತ್ರ ಸೆಟ್ಟೇರಿದೆ. ಚಿತ್ರದ ಹೆಸರು ಹೋಮ್ ಮಿನಿಸ್ಟರ್. ರಾಜರಾಜೇಶ್ವರಿ ನಗರದ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಿತ್ರದ ಮುಹೂರ್ತ ಸಿಂಪಲ್ಲಾಗಿ ನೆರವೇರಿದೆ.
ಚಿತ್ರದ ಹೆಸರು ಹೋಮ್ ಮಿನಿಸ್ಟರ್ ಆದರೂ, ರಾಜಕೀಯದ ಕಥೆ ಚಿತ್ರದಲ್ಲಿಲ್ಲ. ಗಂಡನಿಗೆ ಹೆಂಡತಿಯೇ ಹೋಮ್ ಮಿನಿಸ್ಟರ್ ಎಂಬಂತೆ ಚಿತ್ರದ ಕಥೆ ಇರುತ್ತೆ ಎನ್ನಲಾಗಿದೆ.
ತೆಲುಗಿನಲ್ಲಿ ಉಪೇಂದ್ರ ಅಭಿನಯದ ನಾಗಾರ್ಜುನ ಚಿತ್ರದ ನಿರ್ಮಿಸಿದ್ದವರೇ, ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕರೂ ತೆಲುಗಿನವರೇ ಅಂತೆ.
ಚಿತ್ರಕ್ಕೆ ರಾಗಿಣಿ ನಾಯಕಿ ಎಂಬ ಸುದ್ದಿ ಇದೆಯಾದರೂ, ಕನ್‍ಫರ್ಮ್ ಆಗಿಲ್ಲ. ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ರಿಲೀಸ್ ಆಗಲಿದೆ.