ದರ್ಶನ್ ದುರ್ಯೋಧನನ ಪಾತ್ರದಲ್ಲಿ ನಟಿಸುತ್ತಿರುವ ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿದೆ. ನಾಗಣ್ಣ ನಿರ್ದೇಶನದ, ಮುನಿರತ್ನ ನಿರ್ಮಿಸುತ್ತಿರುವ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಲು ಕಾರಣ ಯಾರು ಗೊತ್ತಾ..? ಮುಖ್ಯಮಂತ್ರಿ ಸಿದ್ದರಾಮಯ್ಯ.
ಹೌದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರದ ಮುಹೂರ್ತ ಇದೇ ತಿಂಗಳು ನೆರವೇರಬೇಕಿತ್ತು. ಆದರೆ, ಮುಹೂರ್ತಕ್ಕೆ ಸಿದ್ದರಾಮಯ್ಯನವರು ಬರಬೇಕು ಎನ್ನುವುದು ನಿರ್ಮಾಪಕ ಮುನಿರತ್ನ ನಿರೀಕ್ಷೆ. ಹೀಗಾಗಿ ಚಿತ್ರದ ಮುಹೂರ್ತವನ್ನು ಆಗಸ್ಟ್ 6ಕ್ಕೆ ಇಟ್ಟುಕೊಂಡಿದ್ದಾರೆ ಮುನಿರತ್ನ. ಅದೇ ದಿನ ದುರ್ಯೋಧನನ ಗೆಟಪ್ ಕೂಡಾ ರಿಲೀಸ್ ಆಗುತ್ತಂತೆ.
ಜುಲೈ 27ಕ್ಕೆ ಮುನಿರತ್ನ ಸಣ್ಣದೊಂದು ಪೂಜೆ ಮಾಡಿಸುತ್ತಾರೆ. ಅದು ಪರ್ಸನಲ್. ಚಿತ್ರದ ಗ್ರ್ಯಾಂಡ್ ಎಂಟ್ರಿ ನಡೆಯೋದು ಆಗಸ್ಟ್ 6ಕ್ಕೆ.