ಈ ರೀತಿ ಕಚ್ಚುವವರು ಮನುಷ್ಯರಾ..? ಇವನು ಸೈಕೋಪಾತ್ ಇರಬೇಕು. ಇವನಿಗೆ ಸರಿಯಾದ ಶಿಕ್ಷೆಯಾಗಲಿ. ಹೀಗೆಂದು ಪ್ರಥಮ್ ಬಗ್ಗೆ ಹೇಳಿರೋದು ಹರ್ಷಿಕಾ ಪೂಣಚ್ಚ. ಪ್ರಥಮ್ ಕಚ್ಚಾಟ, ಹುಚ್ಚಾಟ ಎಲ್ಲರನ್ನೂ ರೇಗಿಸಿಬಿಟ್ಟಿದೆ.
ಇದು ಕೇವಲ ಹರ್ಷಿಕಾ ಪೂಣಚ್ಚ ಒಬ್ಬರ ಧ್ವನಿಯಲ್ಲ. ಬಿಗ್ಬಾಸ್ನಲ್ಲಿ ಪ್ರಥಮ್ ಜೊತೆಗೇ ಇದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡಾ ಇದೇ ಮಾತು ಹೇಳಿದ್ದಾರೆ. ಅವನೊಬ್ಬ ಡ್ರಾಮಾ ಕಿಂಗ್ ಎಂದಿದ್ದಾರೆ. ಭುವನ್ ಮತ್ತು ಸಂಜನಾ ಕೂಡಾ ಅಷ್ಟೆ. ಇಷ್ಟು ಅಸಹ್ಯವಾಗಿ ಕಿತ್ತಾಡಿಕೊಂಡಿರುವ ಇವರಿಗೆ ಸರಿಯಾದ ಮಾನಸಿಕ ಚಿಕಿತ್ಸೆ ಕೊಡಿಸಬೇಕು ಎಂದಿದ್ದಾರೆ.
ಇನ್ನುಳಿದಂತೆ ಬಿಗ್ಬಾಸ್ನಲ್ಲಿದ್ದ ಹಲವು ಸ್ಪರ್ಧಿಗಳು, ಪ್ರಥಮ್ನ ಹುಚ್ಚಾಟಕ್ಕೆ ನೋ ಕಮೆಂಟ್ಸ್ ಎನ್ನುತ್ತಾ, ಇಡೀ ವಿವಾದದಿಂದ ದೂರವೇ ಉಳಿಯುತ್ತಿದ್ದಾರೆ. ಪ್ರಥಮ್ ಬಗ್ಗೆ ಮಾತನಾಡೋಕೂ ಇಷ್ಟವಿಲ್ಲ ಎನ್ನುತ್ತಿದ್ದಾರೆ.
Related Articles :-
ಬಿಗ್ಬಾಸ್ ಪ್ರಥಮ್ಗೆ ಷರತ್ತುಬದ್ಧ ಜಾಮೀನು - ನ್ಯಾಯಾಧೀಶರಿಂದ ಬುದ್ಧಿವಾದ
ತೊಡೆ ಕಚ್ಚಿದ ಪ್ರಥಮ್ ನ್ಯಾಯಾಲಯಕ್ಕೆ ಶರಣು
ಪೊಲೀಸರಿಗೂ ಸಿಕ್ಕದೆ ಬಿಗ್ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!
Udaya Mehta Not Producimg Pratham Movie
ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ