ಮಾಸ್ ಲೀಡರ್. ಶಿವರಾಜ್ ಕುಮಾರ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರದ ಕಥೆ ಏನು? ಅದು ಭಯೋತ್ಪಾದಕರ ಕುರಿತ ಚಿತ್ರವಾ..? ಅಕ್ರಮ ಗಣಿಗಾರಿಕೆ ಕುರಿತ ಚಿತ್ರವಾ..? ರೌಡಿಸಂ ಕುರಿತ ಚಿತ್ರವಾ..? ರಾಜಕೀಯ ಚಿತ್ರವಾ..? ಡ್ರಗ್ ಮಾಫಿಯಾ ಕಥೆಯಿದೆಯಾ.? ಒಂದೇ ಒಂದು ಟ್ರೇಲರ್ ಇಷ್ಟೆಲ್ಲ ಕುತೂಹಲ ಹುಟ್ಟಿಸಿಬಿಟ್ಟಿದೆ.
ಚಿತ್ರದ ಟ್ರೇಲರ್ನಲ್ಲಿ ಇಷ್ಟೆಲ್ಲ ಅಂಶಗಳೂ ಇವೆ. ಹಿಮಾಲಯದಲ್ಲಿ ಶಿವರಾಜ್ ಕುಮಾರ್ ನಡೆಸಿರುವ ಸ್ಟಂಟ್ಗಳು ಮೈ ನವಿರೇಳಿಸುವಂತಿವೆ. ಅಷ್ಟುದ್ಧದ ಟ್ರೇಲರ್ನಲ್ಲಿ ಶಿವರಾಜ್ ಕುಮಾರ್ದು ಒಂದೇ ಒಂದು ಡೈಲಾಗ್ ಇಲ್ಲ.
ಇಡೀ ಟ್ರೇಲರ್ನಲ್ಲಿ ಶಿವರಾಜ್ ಕುಮಾರ್ ವಾಯ್ಸ್ ಕೇಳೋದು ಫೈರ್ ಎಂದು ಮಾತ್ರ. ಅದೊಂದೇ ಡೈಲಾಗ್ಗೆ ತಕ್ಕಂತೆ ಚಿತ್ರದುದ್ದಕ್ಕೂ ಫೈರ್ ಇದೆ. ಕಥೆಯ ಬಗ್ಗೆ ಇಷ್ಟು ಕುತೂಹಲ ಹುಟ್ಟುತ್ತಿರುವುದಕ್ಕೆ ಕಾರಣ, ಶಿವಣ್ಣ ಒಂದು ಕಡೆ ಆರ್ಮಿ ಆಫೀಸರ್ ಗೆಟಪ್ನಲ್ಲಿದ್ದರೆ, ಇನ್ನೊಂದೆಡೆ ಡಾನ್ ಗೆಟಪ್ನಲ್ಲಿ ಕಾಣಿಸ್ತಾರೆ.
ಪ್ರಣೀತಾ ಸುಭಾಷ್ ನಾಯಕಿಯಾಗಿರುವ ಚಿತ್ರದಲ್ಲಿ ಲೂಸ್ ಮಾದ ಯೋಗೀಶ್, ವಿಜಯ ರಾಘವೇಂದ್ರ, ಗುರು ಜಗ್ಗೇಶ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ತರುಣ್ ಶಿವಪ್ಪ ಚಿತ್ರದ ನಿರ್ಮಾಪಕ. ರೋಸ್ ಖ್ಯಾತಿಯ ನರಸಿಂಹ ಚಿತ್ರದ ಕಥೆಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಡುತ್ತಿಲ್ಲ.
Related Articles :-
ಮಾಸ್ ಲೀಡರ್ ಆಡಿಯೋ ರಿಲೀಸ್ ಪಕ್ಕಾ ಮಾಸ್
Mass Leader Songs Release Venue Changed
Nandamuri Balakrishna To Release Mass Leader Songs
Shivarajakumar's Mass Leader In Qatar