` ಬೆತ್ತಲಾಗಿಲ್ಲ..ಬೆತ್ತಲಾಗಿಲ್ಲ.. - ಸಾಕ್ಷಿ ಸಮೇತ ಬಂದರು ಸಂಜನಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sanjana controversy
Sanjana Clarifies with photo

2 ಚಿತ್ರದ ನಗ್ನ ವಿಡಿಯೋ ಲೀಕ್ ಆದ ಎರಡು ದಿನಗಳ ಬಳಿಕ ಸುದ್ದಿಗೋಷ್ಟಿ ಕರೆದು ಸ್ಪಷ್ಟನೆ ಕೊಟ್ಟಿದ್ದಾರೆ. ಅದೂ ಸಾಕ್ಷಿ ಸಮೇತ ಬಂದಿದ್ದಾರೆ. ಮೊದಲು ಇಡೀ ದೃಶ್ಯವನ್ನೇ ನಿರಾಕರಿಸಿ, ನಂತರ ನಟಿಸಿದ್ದು ನಾನೇ ಎಂದಿದ್ದ ಸಂಜನಾ, ಈಗ ನಟಿಸಿರುವುದು ನಿಜ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಮುಂಭಾಗದಲ್ಲಿ ನೀಲಿ ಬಟ್ಟೆ ಮತ್ತು ಪ್ಲಾಸ್ಟರ್ ಅಂಟಿಸಿಕೊಂಡಿರುವ ಫೋಟೋ ಕೊಟ್ಟು, ಸಾಕ್ಷಿ ಇಲ್ಲಿದೆ ಎಂದಿದ್ದಾರೆ ಸಂಜನಾ. ಈ ಫೋಟೋವನ್ನು ಮೇಕಪ್ ರೂಂನಲ್ಲಿ ತೆಗೆದಿದ್ದವರು ಸ್ವತಃ ಸಂಜನಾ. ಆ ಫೋಟೋವನ್ನು ತಮ್ಮ ತಾಯಿಗೂ ಕಳಿಸಿದ್ದರಂತೆ. ತಾನು ನಗ್ನವಾಗಿ ನಟಿಸುತ್ತಿಲ್ಲ ಎಂದು ತಾಯಿಗೂ ಹೇಳಿದ್ದರಂತೆ.

ನಾನು ಆ ದೃಶ್ಯದಲ್ಲಿರುವುದು ನಿಜ. ಆದರೆ, ಬೆನ್ನಿನ ಭಾಗ ಬೆತ್ತಲಾಗಿದ್ದೆನೇ ಹೊರತು, ಸಂಪೂರ್ಣ ಬೆತ್ತಲಾಗಿರಲಿಲ್ಲ. ಚಿತ್ರದಲ್ಲಿನ ಆ ದೃಶ್ಯಕ್ಕೆ ಅದು ಅಗತ್ಯ ಎಂದು ಹೇಳಿದ್ದರು. ನಟಿಸಿದ್ದೆ. ಅಷ್ಟೆ ಎಂದಿದ್ದಾರೆ ಸಂಜನಾ. ನಟಿಸಿದ ಮೇಲೂ ಅದರ ತೀವ್ರತೆ ಅರ್ಥವಾಗಿರಲಿಲ್ಲವಂತೆ.

ಆದರೆ, ಚಿತ್ರದ ಎಡಿಟಿಂಗ್ ದೃಶ್ಯ ನೋಡಿದ ಮೇಲೆ ಬೆಚ್ಚಿಬಿದ್ದಿದ್ದರಂತೆ. ದೇವರು ನನ್ನ ಕಡೆಯಿದ್ದ. ಆ ದೃಶ್ಯವನ್ನು ಸೆನ್ಸಾರ್‍ನವರು ಕಟ್ ಮಾಡಿದರು. ಆದರೆ, ಈಗ ಅದೇ ದೃಶ್ಯ ಲೀಕ್ ಆಗಿದೆ. ಹೋದಲ್ಲಿ ಬಂದಲ್ಲಿ ಸ್ಪಷ್ಟನೆ ಕೊಡುವಂತಾಗಿದೆ. ಇದು ಹೇಗೆ ಲೀಕ್ ಆಯ್ತು ಅನ್ನೋದನ್ನು ನಿರ್ದೇಶಕ, ನಿರ್ಮಾಪಕರೇ ಹೇಳಬೇಕು ಎಂದಿದ್ದಾರೆ ನಟಿ ಸಂಜನಾ.