` ಆಪರೇಷನ್ ಅಲಮೇಲಮ್ಮ ರಿಲೀಸ್‍ಗೂ ಮುನ್ನವೇ ಅಲಮೇಲಮ್ಮ 2 ಕನಸು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
operation almelamma movie image
Shraddha, Rishi In Operation Almelamma

ಆಪರೇಷನ್ ಅಲಮೇಲಮ್ಮ ಈ ವಾರ ರಿಲೀಸ್ ಆಗುತ್ತಿದೆ. ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ, ಸುನಿ ಕೆರಿಯರ್‍ನಲ್ಲಿ ಡಿಫರೆಂಟ್ ಸಿನಿಮಾ. ಇದುವರೆಗೆ ಲವ್ ಸ್ಟೋರಿ, ಪೊಲಿಟಿಕಲ್ ಸಬ್ಜೆಕ್ಟ್ ಮಾಡಿದ್ದ ಸುನಿ, ಈ ಬಾರಿ ಕಿಡ್ನಾಪ್ ಮತ್ತು ತಮಾಷೆ ಎರಡೂ ಇರುವ ಥ್ರಿಲ್ಲರ್ ಕಥೆಯನ್ನು ಎತ್ತಿಟ್ಟುಕೊಂಡಿದ್ದಾರೆ.

ಚಿತ್ರದಲ್ಲಿ ಸುನಿ ಎತ್ತಿಕೊಂಡಿರುವ ಪಾತ್ರಗಳೇ ಡಿಫರೆಂಟ್. ಹೀರೋ ರಿಷಿಯದ್ದು ತರಕಾರಿ ಮಂಡಿಯಲ್ಲಿ ಹರಾಜು ಕೂಗುವ ಪಾತ್ರ. ನಾಯಕಿ ಶ್ರದ್ಧಾರದ್ದು ಇನ್ನೂ ಡಿಫರೆಂಟ್. ಬಬ್ಲಿಯಾಗಿ ಬದುಕಬೇಕು ಎಂಬ ಕನಸಿದ್ದೂ, ಜವಾಬ್ದಾರಿ ಹೊತ್ತಿರುವ ಕಾರಣಕ್ಕೆ ಸೀರಿಯಸ್ಸಾಗಿ ಬದುಕುತ್ತಿರುವ ಹುಡುಗಿ. ಕಾನ್ಸೆಪ್ಟ್ ಏನೋ ಮಜಭೂತಾಗಿದೆ. ಆದರೆ, ಅದನ್ನು ತೆರೆಯ ಮೇಲೆ ಹೇಗೆ ತಂದಿರುತ್ತಾರೆ ಅನ್ನೋದು ಮುಖ್ಯವಾಗುತ್ತೆ. ಅಲ್ಲವೇ. ಸುನಿ ವಿಚಾರಕ್ಕೆ ಬಂದರೆ ಅನುಮಾನಗಳೇನೂ ಇರಲ್ಲ. ಅವರ ಚಿತ್ರಗಳಲ್ಲಿ ಸದಭಿರುಚಿಯ ಪೋಲಿತನ ಧಾರಾಳವಾಗಿರುತ್ತೆ. ಅಂತಹ ಸುನಿ, ಈಗ ಚಿತ್ರ ರಿಲೀಸ್‍ಗೂ ಮುಂಚೆಯೇ ಭಾಗ-2 ಹೊರತರುವ ಆಲೋಚನೆಯಲ್ಲಿದ್ದಾರೆ. ಕಥೆಯೂ ಸಿದ್ಧವಾಗಿದೆಯಂತೆ. ನಾಯಕ ರಿಷಿ ಜೊತೆ ಮಾತುಕತೆಯೂ ನಡೆದಿದೆಯಂತೆ.

ಭಾಗ-2 ಬರಬೇಕೆಂದರೆ, ಚಿತ್ರವನ್ನು ಪ್ರೇಕ್ಷಕ ಒಪ್ಪಿಕೊಳ್ಳಬೇಕು. ಅದು ಸುನಿ ಟೆನ್ಷನ್. ತುಂಬಾ ದೂರವೇನಿಲ್ಲ. ಇದೇ 21ಕ್ಕೆ, ಇದೇ ಶುಕ್ರವಾರ ರಿಲೀಸ್ ಆಗ್ತಾ ಇದೆ.

Related Articles :-

Operation Alamelamma Sequel In Suspense

ಅಲಮೇಲಮ್ಮನ ಹಿಂದಿನ ತರಲೆ ತುಂಟಾಟ ಕಥೆ, ತರಲೆ ತರಲೆಯಾಗಿ

Operation Alamelamma Gets U Certificate

Operation Alamelamma Trailer Released

Hombale Films Take Up Operation Alamelamma