` ಗೆಳೆಯರಿಂದ..ಗೆಳೆತನಕ್ಕಾಗಿ ಹುಟ್ಟಿದ ಧೈರ್ಯಂ ಸಿನಿಮಾ - ಕಥೆ ಮಾತ್ರ... - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dhairyam movie image
Ajai Rao in Dhairyam

ಧೈರ್ಯಂ. ಅಜಯ್ ರಾವ್ ಅಭಿನಯದ ಈ ಚಿತ್ರ, ಅವರ ಇದುವರೆಗಿನ ಚಿತ್ರಗಳಿಗಿಂತ ಕಂಪ್ಲೀಟ್ ವಿಭಿನ್ನವಾಗಿದೆ. ಮಾಸ್ ಲುಕ್‍ನಲ್ಲಿ ಮಿಂಚುತ್ತಿರುವ ಅಜಯ್ ರಾವ್, ತಮ್ಮ ಚಿತ್ರದ ನಿರ್ದೇಶನದ ಅವಕಾಶ ಕೊಟ್ಟಿರುವುದು ಶಿವ ತೇಜಸ್‍ಗೆ. ಶಿವತೇಜಸ್‍ಗೆ ಇದು ಮೊದಲು ಚಿತ್ರ.

ಈ ಹಿಂದೆ ಅಜಯ್ ಅಭಿನಯದ 3 ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದವರು. ಇನ್ನು ಚಿತ್ರದ ಕ್ಯಾಮೆರಾಮನ್, ಸ್ಟಂಟ್ ಮಾಸ್ಟರ್, ಎಡಿಟರ್..ಹೀಗೆ ತಂಡದಲ್ಲಿರುವವರು ಬಹುತೇಕ ಗೆಳೆಯರು. ಹೀಗೆ ಗೆಳೆಯರ ಸಮೂಹವೇ ಸೇರಿಕೊಂಡು ಸಿದ್ಧವಾದ ಸಿನಿಮಾ ಧೈರ್ಯಂ. ಇನ್ನು ಚಿತ್ರದ ಕಥೆ ಮಧ್ಯಮ ವರ್ಗದ ಜನರ ಕನಸು ಮತ್ತು ಹತಾಶೆಯ ಸುತ್ತ ಇದೆ.

ಹಣ, ಅಧಿಕಾರ ಮತ್ತು ಪ್ರಭಾವ ಮೂರೂ ಇಲ್ಲದ ಮಧ್ಯಮ ವರ್ಗದ ಕುಟುಂಬವೊಂದು ಅನುಭವಿಸುವ, ಎದುರಿಸುವ ಸವಾಲಿನ ಕಥೆ ಇದೆಯಂತೆ. ಅಜಯ್ ರಾವ್ ಎನರ್ಜಿಯಂತೂ ಚಿತ್ರದ ಟ್ರೇಲರ್‍ಗಳಲ್ಲಿ ಹೆಚ್ಚಾಗಿಯೇ ಕಾಣುತ್ತಿದೆ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಶುಕ್ರವಾರಕ್ಕೆ. ಧೈರ್ಯಂ ನೋಡಲು ಧೈರ್ಯವಾಗಿ ಹೋಗಬಹುದು.

Ayushmanbhava Movie Gallery

Ellidhe Illitanaka Movie Gallery