ದಿ ವಿಲನ್ ಚಿತ್ರದ ಚಿತ್ರೀಕರಣಕ್ಕೆ ಶಿವರಾಜ್ ಕುಮಾರ್ ಹಾಜರಾಗಿದ್ದೇ ತಡ, ಶೂಟಿಂಗ್ಗೆ ಮಿಂಚಿನ ವೇಗ ಸಿಕ್ಕಿಬಿಟ್ಟಿದೆ. ಇದೇ ಮೊದಲ ಬಾರಿಗೆ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೇ ನಟಿಸುತ್ತಿರುವ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.
ಲಂಡನ್ನ ಗ್ರೀನ್ವಿಚ್ ಪಾರ್ಕ್ನಲ್ಲಿ ಶಿವರಾಜ್ ಕುಮಾರ್, ಸುದೀಪ್, ಪ್ರೇಮ್ ಮತ್ತು ನಿರ್ಮಾಪಕ ಮನೋಹರ್ ಒಟ್ಟಿಗೇ ಇರುವ ಫೋಟೋಗಳನ್ನು ನಿರ್ದೇಶಕ ಪ್ರೇಮ್ ಬಹಿರಂಗಪಡಿಸಿದ್ದಾರೆ. ನಟಿ ಆಮಿ ಜಾಕ್ಸನ್ ಕೂಡಾ ತಂಡದೊಂದಿಗೆ ಇದ್ದಾರೆ.
ಅಭಿಮಾನಿಗಳಿಗೆ ಸುದೀಪ್ ಮತ್ತು ಶಿವಣ್ಣ ಒಟ್ಟಿಗೇ ಶೂಟಿಂಗ್ನಲ್ಲಿರುವ ಫೋಟೋಗಳನ್ನು ನೋಡೋದೇ ಖುಷಿ.