ಮಾಧ್ಯಮಮಿತ್ರರೆ ಪತ್ರಿಕೆ ಜಾಲತಾಣದಲ್ಲಿ ನೀರ್ದೋಸೆ ನಿರ್ದೇಶಕನ ಜೊತೆ ನನ್ನಮುಂದಿನ ಸಿನಿಮ ಎಂದು ನೋಡಿದೆ. ಅದು ಗಾಳಿಸುಧ್ಧಿ. ನನ್ನಮುಂದಿನ ತಯಾರಿ ನಡೆಯುತ್ತಿದೆ ತಿಳಿಸುವೆ. ಜಗ್ಗೇಶ್ ಅವರ ಈ ಹೇಳಿಕೆ ನೀರ್ದೋಸೆ ನಟ-ನಿರ್ದೇಶಕರ ಪುನರ್ಮಿಲನದ ಸುದ್ದಿಯ ಬಲುನಿಗೆ ಗುಂಡುಪಿನ್ನು ಚುಚ್ಚಿದೆ. ವಿಜಯ್ ಪ್ರಸಾದ್ ನಿರ್ದೇಶನದ ನೀರ್ದೋಸೆ ಚಿತ್ರದಲ್ಲಿ ನಾನಿಲ್ಲ ಎಂದಿದ್ದಾರೆ ನಟ ಜಗ್ಗೇಶ್.
ಜಗ್ಗೇಶ್ ಲೇಡಿಸ್ ಟೈಲರ್ನಲ್ಲಿ ನಟಿಸುತ್ತಾರೆ ಎಂಬುದಕ್ಕೆ ಕಾರಣವಾಗಿದ್ದುದೂ ಒಂದು ಟ್ವೀಟ್. ಕನ್ನಡಿಗರನ್ನು ನಗಿಸುವ ಉತ್ತಮ ಕೃತಿಗೆ ಸಹಿ ಮಾಡಿದ್ಧೇನೆ. ನಿರ್ದೇಶಕರ ಹೆಸರು ಹೇಳಿದರೆ ಕನ್ನಡಿಗರು ಖುಷಿಯಾಗುವುದು ಖಂಡಿತ. ತಾಳ್ಮೆಯಿಂದ ಕಾದು ಒಪ್ಪಿಕೊಂಡೆ ಎಂದಿದ್ದರು ಜಗ್ಗೇಶ್. ಇದು ಲೇಡಿಸ್ ಟೈಲರ್ ಕುರಿತ ವಿಷಯವೇ ಇರಬೇಕು ಎಂದುಕೊಂಡವರೇ ಹೆಚ್ಚು.
ಈಗ ಆ ಎಲ್ಲವನ್ನೂ ಗಾಳಿಸುದ್ದಿ ಎನ್ನುವ ಮೂಲಕ, ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ. ಆದರೆ, ಜಗ್ಗೇಶ್ ಅಷ್ಟೊಂದು ಇಷ್ಟಪಟ್ಟುಕೊಂಡು ಒಪ್ಪಿಕೊಂಡಿರುವ ಹೊಸ ಚಿತ್ರ ಯಾವುದು? ನಿರ್ದೇಶಕ ಯಾರು? ಆ ಗುಟ್ಟನ್ನು ಜಗ್ಗೇಶ್ ಇನ್ನೂ ಬಿಟ್ಟುಕೊಟ್ಟಿಲ್ಲ.