ಮಕ್ಕಳನ್ನು ಹೀರೋ ಮಾಡಲು ಹೆತ್ತವರು ನಿರ್ಮಾಪಕರಾಗುವ ದೊಡ್ಡ ಪರಂಪರೆಯೇ ಚಿತ್ರರಂಗದಲ್ಲಿದೆ. ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿ, ಮಲಯಾಳಂ..ಹೀಗೆ ಯಾವುದೇ ಚಿತ್ರರಂಗಕ್ಕೆ ಹೋದರೂ ಇಂತಹ ಉದಾಹರಣೆಗಳು ಸಾಲುಗಟ್ಟುತ್ತವೆ.
ಆದರೆ, ಮಗನ ಚಿತ್ರಕ್ಕೆ ಅಪ್ಪ ಡೈರೆಕ್ಟರ್ ಆಗುವುದು ಹೊಸದು. ಹಿಂದಿಯಲ್ಲಿ ಹೃತಿಕ್ ರೋಷನ್ ಎಂಟ್ರಿ ಕೊಟ್ಟ ಕಹೋನಾ ಪ್ಯಾರ್ ಹೈ ಚಿತ್ರ ನಿರ್ದೇಶಿಸಿದ್ದವರು ಅಪ್ಪ ರಾಕೇಶ್ ರೋಷನ್. ನಂತರವೂ ಹೃತಿಕ್ಗೆ ಕೊಯಿ ಮಿಲ್ ಗಯಾ, ಕ್ರಿಷ್ ಸರಣಿ ಚಿತ್ರಗಳ ಮೂಲಕ ಬ್ರೇಕ್ ಕೊಟ್ಟಿದ್ದವರು.ಕನ್ನಡದಲ್ಲಿ ಮಗ ಆದಿತ್ಯ ಅಭಿನಯದ ಲವ್ ಚಿತ್ರಕ್ಕೆಎಸ್.ವಿ. ರಾಜೇಂದ್ರ ಸಿಂಗ್ ಬಾಬು ಌಕ್ಷನ್ ಕಟ್ ಹೇಳಿದ್ದರು.
ಅಂಥಾದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಆರ್ಮುಗಂ ಖ್ಯಾತಿಯ ರವಿಶಂಕರ್. ಮಗ ಅದ್ವೈತ್ಗಾಗಿ ಚಿತ್ರ ನಿರ್ದೇಶಕನ ಕ್ಯಾಪ್ ತೊಡಲು ಸಿದ್ಧರಾಗಿದ್ದಾರೆ. ತನಗೆ ಹೆಸರು, ಹಣ, ಖ್ಯಾತಿ ಎಲ್ಲವನ್ನೂ ಕೊಟ್ಟ ಕನ್ನಡದಲ್ಲಿಯೇ ತನ್ನ ಮಗನನ್ನು ಹೀರೋ ಮಾಡಬೇಕು ಎನ್ನುವುದು ತಮ್ಮ ಕನಸು ಎಂದಿದ್ದಾರೆ ರವಿಶಂಕರ್. ಸದ್ಯಕ್ಕೆ ಅಮೆರಿಕದಲ್ಲಿರುವ ಅದ್ವೈತ್, ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ನನ್ನ ಮಗನಿಗೆ ಡಾನ್ಸ್, ಫೈಟ್, ಎಲ್ಲವೂ ಗೊತ್ತು ಆದರೆ ಅವೆಲ್ಲಕ್ಕಿಂತ ಹೆಚ್ಚಾಗಿ ಅವನೊಬ್ಬ ಒಳ್ಳೆಯ ನಟ ಎನ್ನುವ ರವಿಶಂಕರ್, ತಮ್ಮ ಮಗನ ಚಿತ್ರದಲ್ಲಿ ವಿಲನ್ ಆದರೂ ಅಚ್ಚರಿಯಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ಯುಗಾದಿಗೆ ಚಿತ್ರ ಸೆಟ್ಟೇರಲಿದ್ದು, 2018ರ ಕೊನೆಯಲ್ಲಿ ಚಿತ್ರ ರಿಲೀಸ್ ಆಗಲಿದೆ.
Related Articles :-