` ಲಂಡನ್ನಲ್ಲಿ ವಿಲನ್ ಜೊತೆ ಸೇರಿದ ಶಿವರಾಜ್ ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar joins the viallian set
Shivarajkumar, Rakshitha Image

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಿ ವಿಲನ್ ಚಿತ್ರದ ಶೂಟಿಂಗ್ ಟೀಂ ಸೇರ್ಪಡೆಯಾಗಿದ್ದಾರೆ. ಲಂಡನ್ನಲ್ಲಿ ಚಿತ್ರದ ಶೂಟಿಂಗ್ ನಡೀತಿದೆ. ವಿಭಿನ್ನ ಲುಕ್ನಲ್ಲಿರುವ ಶಿವರಾಜ್ ಕುಮಾರ್, ತಮ್ಮ ಭಾಗದ ದೃಶ್ಯಗಳ ಚಿತ್ರೀಕರಣದ ಬ್ಯುಸಿಯಾಗಿದ್ದಾರೆ.

ಉದ್ದನೆಯ ಕೂದಲಿನ ಶಿವರಾಜ್ ಕುಮಾರ್ ಲುಕ್ ಎಲ್ಲರ ಕುತೂಹಲ ಕೆರಳಿಸುತ್ತಿದೆ. ಸುದೀಪ್, ಆಮಿ ಜಾಕ್ಸನ್ ಕೂಡಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ವಿಲನ್ ಚಿತ್ರದ ಒಂದೊಂದು ಹಂತವೂ ಪ್ರೇಕ್ಷಕರಲ್ಲಿ, ಅಭಿಮಾನಿಗಳಲ್ಲಿ ನಿರೀಕ್ಷೆಯ ಭಾರ ಹೆಚ್ಚಿಸುತ್ತಲೇ ಇದೆ.