ಪುನೀತ್ ರಾಜ್ಕುಮಾರ್ ಚೆನ್ನೈನಲ್ಲಿ ವೆಟ್ರಿಮಾರನ್ ಅವರನ್ನು ಭೇಟಿ ಮಾಡಿದ್ದು ಸಂಚಲನ ಸೃಷ್ಟಿಸಿತ್ತು.
ವೆಟ್ರಿಮಾರನ್ ನಿರ್ದೇಶನದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ವಿಸಾರಣೈ ರೀಮೇಕ್ನಲ್ಲಿ ಪುನೀತ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಖಚಿತ ವರ್ತಮಾನ ಬಂದಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ಅಪ್ಪು ನಟಿಸ್ತಾ ಇರೋದು ನಿಜ. ಆ ಚಿತ್ರಕ್ಕೆ ವೆಟ್ರಿಮಾರನ್ ನಿರ್ದೇಶಕ ಅನ್ನೋದೂ ನಿಜ.
ಆದರೆ, ಅದು ವಿಸಾರಣೈ ರೀಮೇಕ್ ಅಲ್ಲ ಎಂಬ ಸ್ಪಷ್ಟನೆ ಹೊರಬಿದ್ದಿದೆ. ಚಿತ್ರದ ಕಥೆ ಚಿತ್ರಕಥೆ ಸಿದ್ಧವಾಗುತ್ತಿದ್ದು, ಅಂಜನಿಪುತ್ರದ ನಂತರ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಹಿಂದೆ ಮೌರ್ಯ, ಅಜಯ್ ಚಿತ್ರ ನಿರ್ಮಿಸಿದ್ದ ರಾಕ್ಲೈನ್ ವೆಂಕಟೇಶ್, 11 ವರ್ಷಗಳ ನಂತರ ಪುನೀತ್ ಜೊತೆ ಚಿತ್ರ ನಿರ್ಮಿಸಲಿದ್ದಾರೆ.