` ಮತ್ತೆ ತೆಲುಗಿನತ್ತ ಉಪೇಂದ್ರ - ಈ ಬಾರಿ ಚಿರಂಜೀವಿ ಜೊತೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra movie image
Upendra Image

ರಿಯಲ್ ಸ್ಟಾರ್ ಉಪೇಂದ್ರಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ. ಓಂ, ಎ, ಉಪೇಂದ್ರ, ಸೂಪರ್ ಮೊದಲಾದ ಚಿತ್ರಗಳ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಿತರಾಗಿರುವ ನಟ. ಅಷ್ಟೇ ಅಲ್ಲ, ದೊಡ್ಡ ಫ್ಯಾನ್ ಫಾಲೋಯಿಂಗ್ ಕೂಡಾ ಇದೆ. ಉಪ್ಪಿಯ ಸಿನಿಮಾಗಳು ತೆಲುಗಿಗೆ ಡಬ್ ಆಗುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ನಾಯಕತ್ವದ ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ಈಗ ಮತ್ತೊಮ್ಮೆ ತೆಲುಗಿಗೆ ಹೊರಟಿದ್ದಾರೆ ಉಪೇಂದ್ರ.

ಈ ಬಾರಿ ಉಪೇಂದ್ರ ನಟಿಸಲಿರೋದು ಚಿರಂಜೀವಿ ಚಿತ್ರದಲ್ಲಿ. ಆಗಸ್ಟ್ 22ಕ್ಕೆ ಚಿರಂಜೀವಿ ಹುಟ್ಟುಹಬ್ಬವಿದೆ. ಆ ದಿನ ಉಯ್ಯಲವಾಡ ನರಸಿಂಹ ರೆಡ್ಡಿ ಎಂಬ ಚಿತ್ರ ಘೋಷಣೆಯಾಗುವ ಸಾಧ್ಯತೆಗಳಿವೆ. ಆ ಚಿತ್ರದಲ್ಲಿ ಉಪೇಂದ್ರ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕದಲ್ಲಲಿ ಸಂಗೊಳ್ಳಿ ರಾಯಣ್ಣ ಹೇಗೋ, ಆಂಧ್ರಪ್ರದೇಶದಲ್ಲಿ ಉಯ್ಯಲವಾಡ ನರಸಿಂಹ ರೆಡ್ಡಿ ಹಾಗೆ. ಎಲ್ಲವೂ ಪಕ್ಕಾ ಆದರೆ, ಚಿರಂಜೀವಿಯ 151ನೇ ಸಿನಿಮಾದಲ್ಲಿ ಉಪೇಂದ್ರ ಕೂಡಾ ಇರಲಿದ್ದಾರೆ.

Babru Teaser Launch Gallery

Odeya Audio Launch Gallery