ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಕೇಸ್ ಸಂಚಲನ ಸೃಷ್ಟಿಸಿರುವುದಷ್ಟೇ ಸ್ಟಾರ್ ನಟ, ನಟಿ, ನಿರ್ದೇಶಕರಿಗೂ ಶಾಕ್ ಕೊಟ್ಟಿದೆ.
ಡ್ರಗ್ಸ್ ಕೇಸ್ನಲ್ಲಿ ತೆಲುಗು ನಟ ರವಿತೇಜ, ಚಾರ್ಮಿ, ಮುಮೈತ್ ಖಾನ್, ಪುರಿ ಜಗನ್ನಾಥ್, ಮುಮೈತ್ ಖಾನ್ ಸೇರಿದಂತೆ 15 ಮಂದಿಗೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಟ ತರುಣ್, ಗಾಯಕಿ ಮಾಧುರಿಯ, ಆಕೆಯ ಪತಿ ನಂದು, ಥಾನಿಶ್, ನವದೀಪ್ ಮೊದಲಾದವರ ಹೆಸರೂ ಕೇಳಿ ಬರುತ್ತಿದೆ.
ಇತ್ತೀಚೆಗೆ ಅರೆಸ್ಟ್ ಆಗಿದ್ದ ಡ್ರಗ್ ಡೀಲರ್ವೊಬ್ಬ ಈ ಎಲ್ಲ ನಟ, ನಟಿಯರ ಹೆಸರು ಬಾಯ್ಬಿಟ್ಟಿದ್ದಾನಂತೆ. ಜುಲೈ 19 ರಿಂದ 27ರವರೆಗೂ ವಿಚಾರಣೆ ನಡೆಯಲಿದೆ. ಆ ವಿಚಾರಣೆಗೆ ಇವರೆಲ್ಲ ಹಾಜರಾಗಬೇಕು.
ಅಂದಹಾಗೆ ರವಿತೇಜ ತಮ್ಮ ಸುಭ್ರರಾಜು ಈ ಹಿಂದೆ ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು. ಒಟ್ಟಿನಲ್ಲಿ ಇದು ತೆಲುಗು ಚಿತ್ರರಂಗಕ್ಕೆ ಶುಭಸುದ್ದಿಯಂತೂ ಅಲ್ಲ.