` ಇದೇನ್ ಮಾಡ್ಕೊಂಡ್ರು ಊರ್ವಶಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
urvashi in new trouble
Actress Urvashi In Trouble

ಹಿರಿಯ ನಟಿ ಊರ್ವಶಿ, ರಿಯಾಲಿಟಿ ಶೋವೊಮದರಲ್ಲಿ  ಕುಡಿದು ಬಂದು ಗಲಾಟೆ ಮಾಡಿದ್ದಾರಂತೆ.ಹೀಗೊಂದು ಸುದ್ದಿ ಮಲಯಾಳಂ ಚಿತ್ರರಂಗದಲ್ಲಿ ಹರಿದಾಡ್ತಾ ಇದೆ.

ಶೂಟಿಂಗ್ ಸೆಟ್ಗೆ ಕುಡಿದು ಹೋಗಿದ್ದ ನಟಿ, ಸೆಟ್ನಲ್ಲಿದ್ದವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರಂತೆ. ಈ ವಿಚಾರವಾಗಿ ದೂರೊಂದು ದಾಖಲಾಗಿದ್ದರೂ, ಅದು ಚಿತ್ರರಂಗದ ಒಳಗೇ ಇದೆ. ರೈಟ್ಸ್ ಕಮಿಷನ್ನಲ್ಲಿ ದೂರು ದಾಖಲಾಗಿದೆ. ರಾಯಲ್ ಕವಡಿಯರ್ ಎಂಬುವರು ದೂರು ಕೊಟ್ಟಿದ್ದಾರೆ.

ಒಂದು ತಿಂಗಳೊಳಗೆ ಊರ್ವಶಿ ವಿವರಣೆ ಕೊಡಬೇಕು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಅಚ್ಚರಿಯಿಲ್ಲ ಊರ್ವಶಿ ನಿನ್ನೆ ಮೊನ್ನೆ ಬಂದ ನಟಿಯೇನಲ್ಲ. ಕನ್ನಡದಲ್ಲಿ ಡಾ. ರಾಜ್, ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್ ಸೇರಿದಂತೆ ಘಟಾನುಘಟಿಗಳ ಜೊತೆ ನಟಿಸಿದ್ದ ನಾಯಕಿ.

ಕನ್ನಡದವರಿಗೆ ಊರ್ವಶಿ ಎಂದರೆ ತಕ್ಷಣ ಶ್ರಾವಣ ಬಂತು, ನಾನು ನನ್ನ ಹೆಂಡ್ತಿ, ರಾಮ ಶಾಮ ಭಾಮ ಚಿತ್ರಗಳು ನೆನಪಾಗುತ್ತವೆ. ಹೀಗೆ ಚಿತ್ರರಂಗದಲ್ಲಿ ಅಭಿನಯದಿಂದಲೇ ಅದ್ಭುತ ಹೆಸರು ಸಾಧಿಸಿದ್ದ ಹೀಗೇಕೆ ಮಾಡಿಕೊಂಡರೋ..?