ಕೇರಳದಲ್ಲಿ ತೀವ್ರ ಸಂಚಲನ ಮೂಡಿಸಿದ ಮಲಯಾಳಂ ನಟ ದಿಲೀಪ್ ಕುಮಾರ್ ಬಂಧನ ವಿಚಿತ್ರ ತಿರುವು ಪಡೆಯುತ್ತಿದೆ. ಕನ್ನಡದಲ್ಲೂ ನಟಿಸಿದ್ದ ಖ್ಯಾತ ನಟಿಯೊಬ್ಬರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಲಾಗಿದ್ದ ಪ್ರಕರಣದಲ್ಲಿ ದಿಲೀಪ್ ಬಂಧನವಾಗಿದೆ.
ಈಗ ನಟ ಕಲಾಭವನ್ ಮಣಿ ಹತ್ಯೆಯಲ್ಲೂ ದಿಲೀಪ್ ಕೈವಾಡ ಇದೆ ಎಂಬ ಆರೋಪ ಕೇಳಿ ಬರುತ್ತಿದೆ. ದಕ್ಷಿಣದ ಮಣಿ ಹತ್ಯೆಯಲ್ಲಿ ದಿಲೀಪ್ ಕೈವಾಡ ಇದೆ ಎಂದು ಮಣಿ ಅವರ ಸಹೋದರ ರಾಮಕೃಷ್ಣನ್ ಹಾಗೂ ನಿರ್ದೇಶಕ ಬೈಜು ಕೊಟ್ಟಾರಕ್ಕರ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಸಿಬಿಐಗೆ ತಿಳಿಸಿದ್ದಾರಂತೆ.
ಏಕೋ, ನಟಿ ಅಪಹರಣ, ಲೈಂಗಿಕ ದೌರ್ಜನ್ಯ ದಿನದಿನಕ್ಕೂ ಚಿತ್ರ ವಿಚಿತ್ರ ತಿರುವು ಪಡೆಯುತ್ತಿದೆ.