ಯೋಗರಾಜ್ ಭಟ್ ಮತ್ತು ಗಣೇಶ್ ಪುನರ್ ಮಿಲನದ ಚಿತ್ರ ಮುಗುಳುನಗೆ. ಚಿತ್ರೀಕರಣ ಪೂರೈಸಿರುವ ಚಿತ್ರ, ಈಗ ರಾಜ್ಯಾದ್ಯಂತ ಟೂರ್ ಹೊಡೆಯಲು ಸಿದ್ಧವಾಗಿದೆ. ಅದು ಹಾಡುಗಳ ಬಿಡುಗಡೆಗಾಗಿ. ಈಗಾಗಲೇ ಹೊಡಿ ಒಂಭತ್ತ್ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಲಾಗಿತ್ತು.
ಇನ್ನೊಂದು ಹಾಡು ಬೆಂಗಲೂರಿನಲ್ಲೇ ಬಿಡುಗಡೆಯಾಗಿದೆ. ಗಣೇಶ್ ಮನೆಯಲ್ಲಿ. ಜುಲೈ 14ರಂದು ಶಿಲ್ಪಾ ಗಣೇಶ್ ಹುಟ್ಟುಹಬ್ಬ. ಆ ದಿನವೇ ಎರಡನೇ ಹಾಡು ರಿಲೀಸ್ ಆಗಲಿದೆ. 3ನೇ ಹಾಡು ಜುಲೈ 16ಕ್ಕೆ ದಾವಣಗೆರೆಯಲ್ಲಿ ಬಿಡುಗಡೆಯಾದರೆ, ನಾಲ್ಕನೇ ಹಾಡು ಜುಲೈ 18ಕ್ಕೆ ಬಿಡುಗಡೆಯಾಗಲಿದೆ.
ಈ ನಾಲ್ಕನೇ ಹಾಡಿನ ಬಿಡುಗಡೆಯ ಸ್ಥಳ ನಿರ್ಧಾರವಾಗಿಲ್ಲ. 5 & 6ನೇ ಹಾಡು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ಒಟ್ಟಿನಲ್ಲಿ ಹಾಡು ಬಿಡುಗಡೆಯ ಮೂಲಕವೇ ಚಿತ್ರಕ್ಕೆ ವಿಭಿನ್ನ ರೀತಿಯ ಪ್ರಚಾರ ನೀಡುತ್ತಿದೆ ಚಿತ್ರತಂಡ.
Related Articles :-
Hodi Ombatt Of Mugulu Nage Released In Hubli
Mugulu Nage Shooting Completed With A Song
Mugulu Nage Audio In July First Week
Sharan Sings A Goan Song For Mugulu Nage