‘‘ಕೆಲವರು ನನ್ನ ಹುಟ್ಟುಹಬ್ಬಕ್ಕಾಗಿ ಟಿ-ಶರ್ಟ್ ಹಾಗೂ ಐಡಿ ಕಾರ್ಡ್ ಮಾಡಿಸಲು ಹಣ ಕಲೆಕ್ಟ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂಥವರ ಬಗ್ಗೆ ಮಾಹಿತಿ ಸಿಕ್ಕರೆ, ದಯವಿಟ್ಟು ನನಗೆ ತಿಳಿಸಿ’’ ಇದು ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಸ್ಟೇಟಸ್.
ಅದು ಅಭಿಮಾನಿಗಳಿಗೆ ಎಚ್ಚರಿಕೆಯೂ ಹೌದು. ಸೆಪ್ಟೆಂಬರ್ 2 ರಂದು ಸುದೀಪ್ ಹುಟ್ಟುಹಬ್ಬವಿದೆ. ಇನ್ನೂ ಒಂದೂವರೆ ತಿಂಗಳು ಟೈಮ್ ಇದೆ. ಹುಟ್ಟುಹಬ್ಬದ ನೆಪದಲ್ಲಿ ಹಣ ಹೊಡೆಯಲು ಕೆಲವು ಕಿಡಿಗೇಡಿಗಳು ಆಗಲೇ ಸಂಚು ಮಾಡಿಬಿಟ್ಟಿದ್ದಾರೆ. ಸುದೀಪ್ ಜನ್ಮದಿನ ಸೆಲೆಬ್ರೇಟ್ ಮಾಡಲು ಹಣ ವಸೂಲಿ ಮಾಡುವುದು, ಸುದೀಪ್ ಹೆಸರಿನಲ್ಲಿ
ಟಿ-ಶರ್ಟ್ ಹಾಗೂ ಐಡಿ ಕಾರ್ಡ್ ಮಾಡಿಸುವುದು ಹಾಗೂ ಅವುಗಳಿಗಾಗಿ ಹಣ ಕೇಳುತ್ತಿರುವುದು ಸ್ವತಃ ಸುದೀಪ್ ಗಮನಕ್ಕೆ ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ನಟ ಸುದೀಪ್, ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಸುದೀಪ್ ಫ್ಯಾನ್ಸ್ ಕ್ಲಬ್ಗಳು ಕೂಡಾ ಸುದೀಪ್ ಟ್ವೀಟ್ನ್ನು ರೀಟ್ವೀಟ್ ಮಾಡಿ, ಅಭಿಮಾನಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ.
ನಿಮ್ಮ ಬೆವರಿನ ಹಣವನ್ನು ವಸೂಲಿಗಾರರಿಗೆ ನೀಡಬೇಡಿ. ಸುದೀಪ್ ಬಯಸುವುದು ಪ್ರೀತಿ ಮತ್ತು ಅಭಿಮಾನವನ್ನು ಮಾತ್ರ ಎಂದಿದ್ದಾರೆ.