ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದೊಡ್ಡ ಮೈಲೇಜ್ ಕೊಟ್ಟ ಚಿತ್ರ ಕರಿಯಾ. ಅದು ಪ್ರೇಮ್ ನಿರ್ದೇಶನದ ಮೊದಲ ಚಿತ್ರವೂ ಹೌದು. ಚಿತ್ರ ಯಶಸ್ವಿಯಾಗಿತ್ತು. ನಿರ್ದೇಶಕ ಮತ್ತು ಹೀರೋ ಇಬ್ಬರೂ ಸ್ಟಾರ್ಗಳಾದರು. ಆದರೆ, ಅವರಿಬ್ಬರು ಮತ್ತೆ ಒಂದಾಗಲು ಕಾಲ ಕೂಡಿ ಬಂದಿರಲಿಲ್ಲ. ಈಗ, 14 ವರ್ಷಗಳ ನಂತರ ಶುಭಯೋಗ ಕೂಡಿ ಬಂದಿದೆ.
ಹೆಬ್ಬುಲಿ ಖ್ಯಾತಿಯ ನಿರ್ಮಾಪಕ ಉಮಾಪತಿ ತಮ್ಮ ಮುಂದಿನ ಚಿತ್ರದಲ್ಲಿ ಈ ಸಾಹಸ ಮಾಡಿದ್ದಾರೆ. ದಿ ವಿಲನ್ ಚಿತ್ರದ ನಂತರ ಪ್ರೇಮ್, ಕುರುಕ್ಷೇತ್ರ ಮತ್ತು ತಾರಕ್ ನಂತರ ದರ್ಶನ್ ಬಿಡುವು ಮಾಡಿಕೊಳ್ಳಲಿದ್ದಾರೆ. ನಂತರವಷ್ಟೇ ಪ್ರೇಮ್-ದರ್ಶನ್ ಕಾಂಬಿನೇಷನ್ನ ಈ ಚಿತ್ರ ಸೆಟ್ಟೇರಲಿದೆ.