ರವಿಚಂದ್ರನ್ ನಿರ್ದೇಶನದ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿದ್ದಾರೆ. ಈ ಹಿಂದೆ ರವಿಚಂದ್ರನ್ - ರಾಧಿಕಾ 'ಹಠವಾದಿ' ಮತ್ತು 'ಒಡಹುಟ್ಟಿದವಳು' ಚಿತ್ರದಲ್ಲಿ ನಟಿಸಿದ್ದ ರಾಧಿಕಾ, ಸುಮಾರು 11 ವರ್ಷಗಳ ನಂತರ ಮತ್ತೊಮ್ಮೆ ರವಿಚಂದ್ರನ್ ಜೊತೆಯಾಗಿದ್ದಾರೆ.
ಈ ಚಿತ್ರಕ್ಕೆ ರವಿಚಂದ್ರನ್ ಬರೀ ನಾಯಕನಷ್ಟೇ ಅಲ್ಲ, ಕಥೆ, ಚಿತ್ರಕಥೆಯೂ ಅವರದ್ದೇ. ನಿರ್ದೇಶಕರೂ ಅವರೇ. ಚಿತ್ರವನ್ನು ಈಶ್ವರಿ ಪ್ರೊಡಕ್ಷನ್ ಬ್ಯಾನರ್‌ನಡಿ ನಿರ್ಮಿಸುತ್ತಿದ್ದಾರೆ ಗೌತಮ್ ಶ್ರೀವತ್ಸ ಸಂಗೀತ ಮತ್ತು ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ ಚಿತ್ರಕ್ಕಿದೆ. ರವಿಚಂದ್ರನ್ ಈಗಾಗಲೇ 'ದಶರಥ' ಮತ್ತು 'ಬಕಾಸುರ' ಚಿತ್ರಗಳನ್ನು ಬಹುತೇಕ ಮುಗಿಸಿದ್ದಾರೆ.
Related Articles :-
Radhika Is The Heroine For Rajendra Ponnappa