` ಹೆಬ್ಬುಲಿ ನಿರ್ಮಾಪಕರ ಜೊತೆ ಅಪ್ಪು ಹೊಸ ಚಿತ್ರ - ಯಾವ ಕಥೆ ಇಷ್ಟವಾಗುತ್ತೋ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Hebbuli producer & puneeth team up in 2018
Puneeth Rajkumar, Umapathy Image

ಎಸ್ಜಿಬಿ ಮೈನ್ಸ್ & ಕನ್ಸ್ಟ್ರಕ್ಷನ್ನ ಮಾಲೀಕ ಉಮಾಪತಿ, ಹೆಬ್ಬುಲಿ ಸಿನಿಮಾ ಮೂಲಕ ಖ್ಯಾತರಾದವರು. ಈಗ ಉಮಾಪತಿ ಪುನೀತ್ ಜೊತೆಗೊಂದು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಆ ಚಿತ್ರ ಸೆಟ್ಟೇರೋದು 2018ರಲ್ಲಿ. ಪುನೀತ್ಗೆ ಈಗ ಮೂವರು ನಿರ್ದೇಶಕರು

ಕಥೆ ಹೇಳುತ್ತಿದ್ದಾರಂತೆ. ಆ ಮೂವರಲ್ಲಿ ಯಾರ ಕಥೆ ಇಷ್ಟವಾಗುತ್ತೋ, ಅದು ಸಿನಿಮಾ ಆಗಲಿದೆ. ಆ ಚಿತ್ರದಲ್ಲಿ ಪುನೀತ್, ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದೂ ಲೀಕ್ ಆಗಿದೆ. ಸದ್ಯಕ್ಕೆ ಆಂಜನಿಪುತ್ರ ಚಿತ್ರದಲ್ಲಿ ಬ್ಯುಸಿಯಾಗಿರುವ

ಪುನೀತ್ ರಾಜ್ಕುಮಾರ್, ನಂತರ ಇನ್ನೆರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಆ ಎರಡೂ ಚಿತ್ರಗಳು ಮುಗಿದ ನಂತರ, 3ನೇ ಸಿನಿಮಾ ಹೆಬ್ಬುಲಿ ನಿರ್ಮಾಪಕರ ಪಾಲಿಗೆ ದಕ್ಕಿದೆ.