ಚಾಲೆಂಜಿಂಗ್ ಸ್ಟಾರ್ ದರ್ಶನ್, ಕುರುಕ್ಷೇತ್ರ ಚಿತ್ರವನ್ನು ಕೈಬಿಟ್ಟಿಲ್ಲ. ಅಂತಹ ಅವಕಾಶವನ್ನು ದರ್ಶನ್ ಬಿಡೋದಿಲ್ಲ. ವದಂತಿಗಳಿಗೆಲ್ಲ ಕಿವಿಗೊಡಬೇಡಿ ಅನ್ನೋ ಸುದ್ದಿ ಡಿ ಕ್ಯಾಂಪ್ನಿಂದ ಹೊರಬಿದ್ದಿದೆ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋಧನ ಪಾತ್ರ ಮಾಡುತ್ತಿದ್ದು,
ಈಗಾಗಲೇ ಫೋಟೋ ಶೂಟ್ ಕೂಡಾ ಮುಗಿದಿದೆ. ದುರ್ಯೋಧನನ ಪಾತ್ರಕ್ಕಾಗಿ ದರ್ಶನ್, ತೂಕ ಹೆಚ್ಚಿಸಿಕೊಳ್ಳುತ್ತಿದ್ದು, ತಾಲೀಮು ನಡೆಸುತ್ತಿದ್ದಾರೆ. ಒಬ್ಬ ನಟನ ಜೀವನದಲ್ಲಿ ಸಿಗುವ ಅಪರೂಪದ ಅವಕಾಶ ಇದು ಎಂದು ಸ್ಪಷ್ಟಪಡಿಸಿದ್ದಾರೆ ದಿನಕರ್ ತೂಗುದೀಪ. ಈಗಾಗಲೇ ಚಿತ್ರಕ್ಕಾಗಿ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರ್ಜರಿ ಸೆಟ್ ಸಿದ್ಧವಾಗುತ್ತಿದೆಯಂತೆ.