` ರವಿಚಂದ್ರನ್ ಮಗನಿಗೆ ಕಮಲ್​ಹಾಸನ್ ಮಗಳು ನಾಯಕಿ? - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
akshara hassan, vikaram ravichandran image
akshara hassan, vikaram ravichandran

ರವಿಚಂದ್ರನ್​ರ ಎರಡನೇ ಮಗ ವಿಕ್ರಂ, ನಾಯಕ ನಟನಾಗುತ್ತಿರುವುದು ಹಳೆಯ ಸುದ್ದಿ. ಈಗ ಹೊಸ ಸುದ್ದಿ ಹೊರಬೀಳುತ್ತಿದೆ. ವಿಕ್ರಂ ನಾಯಕನಾಗಿ ನಟಿಸಲಿರುವ ಮೊದಲ ಚಿತ್ರಕ್ಕೆ ನಾಯಕಿಯಾಗಲು ಕಮಲ್ ಹಾಸನ್ ಮಗಳು ಬರುತ್ತಿದ್ದಾರಂತೆ.

ಕಮಲ್ ಹಾಸನ್ ಮಗಳು ಎಂದರೆ, ಶೃತಿ ಹಾಸನ್ ಅಲ್ಲ. ಎರಡನೇ ಮಗಳು ಅಕ್ಷರ ಹಾಸನ್. ಈಗಾಗಲೇ ಚಿತ್ರದ ಕಥೆ ಕೇಳಿರುವ ಅಕ್ಷರ ಹಾಸನ್, ಚಿತ್ರದಲ್ಲಿ ನಟಿಸೋಕೆ ಬಹುತೇಕ ಒಪ್ಪಿದ್ದಾರಂತೆ. 

ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ ಚಿತ್ರಕ್ಕೆ, ನಾಗಶೇಖರ್ ಅಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಬಣ್ಣ ಹಚ್ಚಿದರೆ, ಅಕ್ಷರ ಹಾಸನ್​ಗೆ ಇದು ಮೊದಲ ಚಿತ್ರವಾಗಲಿದೆ.