` ಬಂದು ಹೋಗ್ತಾ ಇರಿ - ಸ್ಯಾಂಡಲ್​ವುಡ್ ಸ್ಟಾರ್​ಗಳಿಗೆ ಟಾಲಿವುಡ್​ನ ವಿಶಾಲ್ ಆಹ್ವಾನ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
lets unite says vishal
Actor Vishal Image

ನಾವೂ ಬರ್ತಾ ಇರ್ತೀವಿ. ನೀವೂ ಬರ್ತಾ ಹೋಗ್ತಾ ಇರಬೇಕು. ನೆಂಟರ ಮನೆಗೆ ಹೋದವರು ಹೇಳೋ ಮಾತದು. ತಮಿಳು ನಟ ವಿಶಾಲ್, ಇತ್ತೀಚಿಗೆ ಕನ್ನಡದ ಸ್ಟಾರ್​ಗಳಿಗೆ ಅಂಥಾದ್ದೊಂದು ಆಹ್ವಾನ ಕೊಟ್ಟು ಹೋಗಿದ್ದಾರೆ.

ರಘುವೀರ್ ಅನ್ನೋ ಚಿತ್ರದ ಆಡಿಯೋ ಬಿಡುಗಡೆಗೆ ಬೆಂಗಳೂರಿಗೆ ಆಗಮಿಸಿದ್ದ ನಟ ವಿಶಾಲ್, ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷರೂ ಹೌದು. ನಾನು ಈಗ ಕನ್ನಡ ಸಿನಿಮಾ ಆಡಿಯೋ ಬಿಡುಗಡೆಗೆ ಬಂದಿದ್ದೇನೆ. ಅದೇ ರೀತಿ ತಮಿಳು ಚಿತ್ರಗಳ ಆಡಿಯೋ ಬಿಡುಗಡೆಗೆ ಪುನೀತ್, ಶಿವಣ್ಣ, ಸುದೀಪ್ ಕೂಡಾ ಬರಬೇಕು ಎಂದರು.

ಅದು ನಿಜವೂ ಹೌದು. ಕಲಾವಿದರಿಗೆ ಭಾಷೆಯ ಹಂಗಿಲ್ಲ. ಏನೇ ಬಾಂಧವ್ಯವಿದ್ದರೂ, ಕಾವೇರಿ ವಿವಾದ ಭುಗಿಲೆದ್ದುಬಿಟ್ಟರೆ, ತಮಿಳು ಮತ್ತು ಕನ್ನಡ ಚಿತ್ರದ ಸ್ಟಾರ್​ಗಳು ಭಾರತ - ಪಾಕಿಸ್ತಾನದವರಂತೆ ಇರಬೇಕಾಗುತ್ತೆ.  ಅಂಥಾದ್ದೊಂದು ವೈರತ್ವ ಹೋಗಬೇಕು ಎಂದರೆ, ಹೋಗಿ ಬಂದು ಮಾಡ್ತಾ ಇರಬೇಕು ಅನ್ನೋ ಹಳೆಯ ಸಂಪ್ರದಾಯವನ್ನ ಪಾಲಿಸಬೇಕು. ಅಷ್ಟೆ. 

ಅದು ಸಾಧ್ಯವಾಗುತ್ತೋ ಇಲ್ಲವೋ ಬೇರೆ ಮಾತು. ಏಕೆಂದರೆ, ಈಗ ಕಾವೇರಿ ವಿವಾದ ತಣ್ಣಗಿದೆ. ಆದರೆ, ಬಾಂಧವ್ಯ ಚೆನ್ನಾಗಿಟ್ಟುಕೊಳ್ಳಬೇಕೆಂಬ ಮನಸ್ಥಿತಿ ಎಲ್ಲರಿಗೂ ಬಂದರೆ, ಒಳ್ಳೆಯದೇ ಅಲ್ವಾ..?

Johnny Johnny Yes Papa Movie Gallery

Rightbanner02_statement_inside

Dalapathi Movie Gallery