ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕರಾಗಿ ನಟಿಸುತ್ತಿರುವ ಸಾಹೇಬ ಚಿತ್ರ ರಿಲೀಸ್‍ಗೆ ರೆಡಿಯಾಗುತ್ತಿದೆ. ಈಗ ರವಿಚಂದ್ರನ್‍ರ ಎರಡನೇ ಮಗ ವಿಕ್ರಂ ಕೂಡಾ ಹೀರೋ ಆಗುತ್ತಿದ್ದಾರೆ.
ವಿಕ್ರಂ ಕೂಡಾ ತಂದೆಯ ಬ್ಯಾನರ್‍ನಲ್ಲಿ ಲಾಂಚ್ ಆಗುತ್ತಿಲ್ಲ. ವಿಕ್ರಂ ಲಾಂಚ್ ಆಗ್ತಿರೋದು ಆರ್.ಎಸ್. ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ. ಚಿತ್ರದ ನಿರ್ದೇಶಕ ನಾಗಶೇಖರ್. ಆಷಾಡ ಮುಗಿದು ಶ್ರಾವಣ ಶುರುವಾದೊಡನೆ, ಚಿತ್ರಕ್ಕೆ ಮುಹೂರ್ತವಾಗಲಿದೆ. ಚಿತ್ರದ ಕಥೆ ಓಕೆ ಆಗಿದ್ದು, ಟೈಟಲ್, ತಾರಾಗಣದ ಆಯ್ಕೆ ಇನ್ನಷ್ಟೇ ಶುರುವಾಗಬೇಕಿದೆ.
ವಿಕ್ರಂಗೆ ನಟನೆಗಿಂತ ಡೈರೆಕ್ಷನ್ ಇಷ್ಟ ಎಂದು ರವಿಚಂದ್ರನ್ ಹೇಳಿಕೊಳ್ತಾ ಇದ್ರು. ಆದರೆ, ಮನೋರಂಜನ್‍ಗೂ ಮೊದಲೇ ಮಲ್ಲ ಸೇರಿದಂತೆ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ವಿಕ್ರಂ. ಥೇಟು ರವಿಚಂದ್ರನ್ ಎಂಟ್ರಿ ಕೊಟ್ಟಂತೆಯೇ. ರವಿಚಂದ್ರನ್ ಕೂಡಾ ಹೀಗೇನೇ ಮೊದಲು ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿಯೇ, ಹೀರೋ ಆದವರು.
ಈಗ ಒಬ್ಬ ಮಗ ಹೀರೋ ಆಗಿದ್ದಾನೆ. ತೆರೆಗೆ ಬರೋದಷ್ಟೇ ಬಾಕಿ. ಎರಡನೇ ಮಗ ಹೀರೋ ಆಗುತ್ತಿದ್ದಾನೆ. ಕ್ಯಾಮೆರಾ ಸ್ಟಾರ್ಟ್ ಆಗೋದಷ್ಟೇ ಬಾಕಿ. ಇಬ್ಬರೂ ಮಕ್ಕಳಿಗೆ ತಮ್ಮ ಬ್ಯಾನರ್‍ನಲ್ಲಿ ಚಿತ್ರ ಮಾಡಲು ಆಗಲಿಲ್ಲ ಅನ್ನೋದಷ್ಟೇ ರವಿಚಂದ್ರನ್ ಕೊರಗು.