ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಜುಲೈ 3ರಂದು ಫಿಕ್ಸ್ ಆಗಿದೆ. ಕಿರಿಕ್ ಪಾರ್ಟಿ ಚಿತ್ರದ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ರಿಯಲ್ ಲೈಫ್ನಲ್ಲೂ ಜೋಡಿಯಾಗುತ್ತಿದ್ದಾರೆ. ಜುಲೈ 3ರಂದು ಕೊಡಗಿನ ವಿರಾಜಪೇಟೆಯಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಉಂಗುರ ಬದಲಿಸಿಕೊಳ್ಳಲಿದ್ದಾರೆ. ಎರಡೂ ಕುಟುಂಬದ ಸದಸ್ಯರು ಮತ್ತು ಆಪ್ತ ಗೆಳೆಯರಷ್ಟೇ ನಿಶ್ಚಿತಾರ್ಥದಲ್ಲಿ ಭಾಗವಹಿಸುತ್ತಿದ್ಧಾರೆ. ವಿರಾಜಪೇಟೆಯ ಸೆರನಿಟಿ ಹಾಲ್ ಬುಕ್ ಮಾಡಲಾಗಿದ್ದು, ಆ ದಿನ ಸಂಜೆ 6.30ಕ್ಕೆ ನಿಶ್ಚಿತಾರ್ಥ.
ಡಿಸೈನರ್ ಶ್ರದ್ಧಾ ಪೊನ್ನಪ್ಪ, ರಶ್ಮಿಕಾಗೆ ಗೌನ್ ಡಿಸೈನ್ ಮಾಡಿಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮ ಸೂಟ್ನ್ನು ತಾವೇ ಡಿಸೈನ್ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವಿವೇಕ್ ಸೋಮಯ್ಯ ತಂಡದ ಡಿ.ಜೆ. ಡ್ಯಾನ್ಸ್ ಕುಡಾ ಇರುತ್ತೆ.