ಆಕೆ ಚಿತ್ರ ಇದೇ ಜೂನ್ 30ರಂದು ಬಿಡುಗಡೆಯಾಗ್ತಾ ಇದೆ. ಈಗಾಗಲೇ ಚಿತ್ರದ ಹಾರರ್ ಟ್ರೇಲರ್, ನಿರೀಕ್ಷೆ ಹುಟ್ಟಿಸಿದೆ. ದರ್ಶನ್, ಸುದೀಪ್, ರಮ್ಯಾ ಸೇರಿದಂತೆ ಚಿತ್ರರಂಗದ ಹಲವರು ಟ್ರೇಲರ್ ನೋಡಿಯೇ ಥ್ರಿಲ್ ಆಗಿದ್ದಾರೆ. ಈಗ ಥ್ರಿಲ್ ಆಗಿರೋದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್.
ಆಕೆ ಚಿತ್ರದ ಟ್ರೇಲರ್, ಹಾಲಿವುಡ್ ಸಿನಿಮಾಗಳಿಗೆ ಸಡ್ಡು ಹೊಡೆಯುವಂತಿದೆ. ಚಿತ್ರವನ್ನು ನಾನು ನೋಡಿಯೇ ನೋಡುತ್ತೇನೆ. ಚೈತನ್ಯ ಚಿತ್ರವನ್ನು ಅದ್ಭುತವಾಗಿ ಸೃಷ್ಟಿಸಿದ್ದಾರೆ ಎಂದಿರುವ ಅಪ್ಪು ಚಿತ್ರವನ್ನು ನೋಡಲು ನಾನು ಕಾತರನಾಗಿದ್ದೇನೆ ಎಂದಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ, ಆಪ್ತಮಿತ್ರ ಚಿರಂಜೀವಿ ಸರ್ಜಾಗಾಗಿ ಈ ಚಿತ್ರ ನೋಡುತ್ತೇನೆ ಎಂದಿರುವ ಅಪ್ಪು, ಅಭಿಮಾನಿಗಳಲ್ಲಿ ಆಕೆ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
Related Articles :-
ಆಕೆ ಚಿತ್ರದ ಭಯಾನಕ ಅನುಭವಗಳು - ಕೇಳಿದರೆ ಬೆಚ್ಚಿಬೀಳುತ್ತೀರಿ
ಚಿರುವಿನ 'ಆಕೆ'ಗೆ ಕಿಚ್ಚನ ಮೆಚ್ಚುಗೆ
ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್ಗಿರಿ
ಆಕೆ ಅರ್ಧ ಸ್ಯಾಂಡಲ್ವುಡ್, ಉಳಿದರ್ಧ ಹಾಲಿವುಡ್