ರೈತರ 50 ಸಾವಿರ ರೂ.ವರೆಗಿನ ಕೃಷಿ ಸಾಲಮನ್ನಾ ಮಾಡಿರುವ ಸಿಎಂ ಸಿದ್ದರಾಮಯ್ಯ, ರೈತರ ಸಾಲ ವಸೂಲಿಗೆ ಹೋಗುವ ಬ್ಯಾಂಕ್ ಅಧಿಕಾರಿಗಳಿಗೆ ಚಳಿ ಬಿಡಿಸುತ್ತಿದ್ದಾರೆ. ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡದಂತೆ, ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಿದ್ದಾರೆ.
ಆದರೆ, ಅದೇ ಸಿದ್ದರಾಮಯ್ಯ ಈ ಹಿಂದೆ, ರಾಜಕೀಯದ ಆರಂಭದ ದಿನಗಳಲ್ಲಿ ಸಿನಿಮಾವೊಂದರಲ್ಲಿ ನಟಿಸಿದ್ದರು. ಅದು ಲಂಕೇಶ್ ನಿರ್ದೇಶನದ ಎಲ್ಲಿಂದಲೋ ಬಂದವರು ಚಿತ್ರ. ಆ ಚಿತ್ರದಲ್ಲಿ ಸಿದ್ದರಾಮಯ್ಯ ಪುಟ್ಟದೊಂದು ಪಾತ್ರ ಮಾಡಿದ್ದಾರೆ. ಅದು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವ ಬ್ಯಾಂಕ್ ಅಧಿಕಾರಿಯ ಪಾತ್ರ.
ವೀಕೆಂಡ್ ವಿತ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ತಮ್ಮ ಎಲ್ಲಿಂದಲೋ ಬಂದವರು ಚಿತ್ರದ ನೆನಪು ಹಂಚಿಕೊಂಡರು. ವಿಶೇಷವೆಂದರೆ, ಎಂದೋ ನಟಿಸಿದ್ದ ಪಾತ್ರದ ನೆನಪೇ ಅವರಿಗೆ ಇರಲಿಲ್ಲ. ಅದನ್ನು ನೆನಪಿಸಿದವರು ಸುರೇಶ್ ಹೆಬ್ಳೀಕರ್.