ಚಿರಂಜೀವಿ ಸರ್ಜಾ ಅಭಿನಯದ ಆಕೆ ಚಿತ್ರಕ್ಕೆ ಚಿತ್ರರಂಗದಲ್ಲಿ ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಈಗ ಆಕೆಯನ್ನು ಹೊಗಳುವ ಸರದಿ ಕಿಚ್ಚ ಸುದೀಪ್ ಅವರದ್ದು. ಆಕೆ ಚಿತ್ರದ ಟ್ರೇಲರ್ ನೋಡಿಯೇ ಸುದೀಪ್ ಫಿದಾ ಆಗಿ ಹೋಗಿದ್ದಾರೆ.
ಚಿರು ಸರ್ಜಾ, ಸುದೀಪ್‍ರನ್ನ ತನ್ನ ಗಾಡ್‍ಫಾದರ್ ಎಂದೇ ಹೇಳಿಕೊಳ್ತಾರೆ. ಸುದೀಪ್ ಕೂಡಾ ಅಷ್ಟೆ. ಈ ಹಿಂದೆ ವರದನಾಯಕ ಚಿತ್ರದಲ್ಲಿ ಸುದೀಪ್ ಪೋಷಕ ನಟನಾಗಿ ನಟಿಸಿದ್ದರು. ಆ ಚಿತ್ರಕ್ಕೆ ಚಿರು ನಾಯಕರಾಗಿದ್ದರು.
ಚಿರಂಜೀವಿ ಸರ್ಜಾಗೆ ಬೆನ್ನು ತಟ್ಟುವ, ಒಳ್ಳೆಯದು ಮಾಡಿದಾಗ ಮೆಚ್ಚುವ, ತಪ್ಪು ಮಾಡಿದಾಗ ಒಳಗೇ ಕರೆದು ಬುದ್ದಿ ಹೇಳುವ ಒಂದು ಆತ್ಮೀಯತೆಯನ್ನು ಸುದೀಪ್ ಇಟ್ಟುಕೊಂಡಿದ್ದಾರೆ.
ಆ ಆತ್ಮೀಯತೆಯ ಇನ್ನೊಂದು ಹೆಜ್ಜೆಯೇ ಈ ಹೊಗಳಿಕೆ. ಸುದೀಪ್ ಬಳಿ ಹೊಗಳಿಸಿಕೊಳ್ಳೋದು ಸುಮ್ಮನೆ ಮಾತಲ್ಲ. ಇಷ್ಟವಾಗದೇ ಹೋದರೆ, ಏನೊಂದೂ ಮಾತನಾಡದೆ ಸುಮ್ಮನಾಗಿಬಿಡುವ ಸುದೀಪ್, ಆಕೆ ಚಿತ್ರವನ್ನು ಮೆಚ್ಚಿದ್ದಾರೆ ಎಂದರೆ, ಚಿತ್ರದಲ್ಲಿ ಸ್ಪೆಷಲ್ ಇದೆ ಎಂದೇ ಅರ್ಥ.
ಆಕೆ, ಇದೇ ಜೂನ್ 30ಕ್ಕೆ ತೆರೆ ಕಾಣ್ತಾ ಇದೆ. ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ ನಾಯಕ-ನಾಯಕಿ. ಚೈತನ್ಯ ನಿರ್ದೇಶನದ ಚಿತ್ರ ಆಕೆ. ಟ್ರೇಲರ್ ನೋಡಿಯೇ ಭಯಬಿದ್ದವರು, ಚಿತ್ರವನ್ನು ಮಿಸ್ ಮಾಡಿಕೊಳ್ಳೋದಿಲ್ಲ ಅನ್ನೋ ಗ್ಯಾರಂಟಿ ಚಿತ್ರತಂಡಕ್ಕಿದೆ.
Related Articles :-
ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್ಗಿರಿ
ಆಕೆ ಅರ್ಧ ಸ್ಯಾಂಡಲ್ವುಡ್, ಉಳಿದರ್ಧ ಹಾಲಿವುಡ್
Will It Be 9th Or 16th For Aake?
Eros International Presents Aake
Chaitanya - Chiru Film Titled Aake