ಆಗಸ್ಟ್ 27ರ ಭಾನುವಾರ, ನವದೆಹಲಿಯಲ್ಲಿ ವಿಷ್ಣುವರ್ಧನ್ ಮೇಣದ ಪ್ರತಿಮೆ ಅನಾವರಣವಾಗುತ್ತಿದೆ. ಅದರ ಜೊತೆಯಲ್ಲೇ ದೆಹಲಿಯ ಕರ್ನಾಟಕ ಸಂಘದ ಆವರಣದಲ್ಲಿ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವವೂ ನಡೆಯುತ್ತಿದೆ. ಸುಮಾರು 6 ಅಡಿ ಎತ್ತರದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಮೇಣದ ಪ್ರತಿಮೆ ಅನಾವರಣಗೊಳ್ಳುತ್ತಿದೆ.
ಇದೇ ಮೊದಲ ಬಾರಿಗೆ ಕರ್ನಾಟಕವನ್ನು ಬಿಟ್ಟು ಹೊರಗೆ ಅದೂ ರಾಷ್ಟ್ರದ ರಾಜಧಾನಿಯಲ್ಲಿ ಕನ್ನಡ ಕಲಾವಿದನೊಬ್ಬನ ರಾಷ್ಟ್ರೀಯ ಉತ್ಸವ ನಡೆಯುತ್ತಿರುವುದು ವಿಶೇಷ. ರಾಜ್ಯದಿಂದ ಸುಮಾರು 500ಕ್ಕೂ ಹೆಚ್ಚು ವಿಷ್ಣು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಭಾರತಿ ವಿಷ್ಣುವರ್ಧನ್ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಇನ್ನೂ ಅಂತಿಮವಾಗಿಲ್ಲ. ರಾಷ್ಟ್ರೀಯ ಉತ್ಸವದಲ್ಲಿ ವಿಷ್ಣುವರ್ಧನ್ ನಟಿಸಿರುವ ಚಲನಚಿತ್ರಗಳ ಫೋಟೋ ಪ್ರದರ್ಶನವೂ ಇರಲಿದೆ.