ಹೌದು, ಮದುವೆಯಾಗುತ್ತಿದ್ದೇವೆ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದು, ಎಂಜೇಜ್‍ಮೆಂಟ್ ಫಿಕ್ಸ್ ಆಗಿರುವುದು ಹಳೆಯ ವಿಚಾರ. ಆದರೆ, ಪ್ರೀತಿ ಶುರುವಾಗಿದ್ದು ಹೇಗೆ ಅನ್ನೋದರ ಬಗ್ಗೆ ರಕ್ಷಿತ್ ಬಾಯಿಬಿಟ್ಟಿರಲೇ ಇಲ್ಲ.
ಆಗೆಲ್ಲ ನಾಚಿಕೊಳ್ಳುತ್ತಿದ್ದ ರಕ್ಷಿತ್ ಶೆಟ್ಟಿ, ಈಗ ಹೇಳಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಆಯ್ಕೆಯಾದಾಗಿನಿಂದ ಶೂಟಿಂಗ್ ಮುಗಿಯುವವರೆಗೂ ಇಬ್ಬರ ಮಧ್ಯೆ ಅಂಥದ್ದೇನೂ ಇರಲಿಲ್ಲವಂತೆ. ತಮ್ಮ ಪಾತ್ರದ ಶೂಟಿಂಗ್ ಮುಗಿದ ಮೇಲೂ ಆಗಾಗ್ಗೆ ಸೆಟ್‍ಗೆ ಬರುತ್ತಿದ್ದ ರಶ್ಮಿಕಾರನ್ನು ನೋಡುತ್ತಿದ್ದ ರಕ್ಷಿತ್‍ಗೆ, ರಶ್ಮಿಕಾ ಇಷ್ಟವಾಗ್ತಾ ಹೋದರಂತೆ.
ರಶ್ಮಿಕಾಗೂ ಹಾಗೇ ಅನ್ನಿಸೋಕೆ ಶುರುವಾಗಿತ್ತು. ಆದರೆ, ಒಬ್ಬರಿಗೊಬ್ಬರು ಇದುವರೆಗೆ ಐ ಲವ್ ಯೂ ಎಂದು ಹೇಳಿಕೊಂಡಿಲ್ಲ. ಕಳೆದ ವರ್ಷ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ 20 ಉಡುಗೊರೆ ಕೊಟ್ಟರಂತೆ ರಶ್ಮಿಕಾ. ಅದು ರಕ್ಷಿತ್‍ಗೆ ಇಷ್ಟವಾದರೂ, ಆಗಲೂ ರಕ್ಷಿತ್ ಬಾಯಿ ಬಿಡಲಿಲ್ಲ. ರಶ್ಮಿಕಾ ಹುಟ್ಟುಹಬ್ಬಕ್ಕೆ ಉಂಗುರ ಕೊಟ್ಟಾಗಲೂ ಇಬ್ಬರೂ ಪ್ರೀತಿಯ ಮಾತನಾಡಲಿಲ್ಲ.
ಸಿಕ್ಕರೆ ಇಂತಹ ಸೊಸೆ ಸಿಗಬೇಕು ಎಂದು ತಾಯಿ, ನಿನಗೆ ಇಂತಹ ಹುಡುಗಿಯನ್ನೇ ನೋಡ್ತೀವಿ ಎಂದು ಅಣ್ಣ-ಅತ್ತಿಗೆ, ರಶ್ಮಿಕಾರನ್ನು ತೋರಿಸಿಕೊಂಡೇ ಹೇಳುತ್ತಿದ್ದಾಗಲೂ ರಕ್ಷಿತ್ ಶೆಟ್ಟಿ, ಪ್ರೀತಿಯನ್ನ ಹೇಳಿಕೊಂಡಿರಲಿಲ್ಲ.
ಕೊನೆಗೆ ಮಾಧ್ಯಮಗಳಲ್ಲಿ ಸುದ್ದಿಯಾದಾಗ ಇಬ್ಬರ ತಂದೆ ತಾಯಿಯೂ ಕರೆದು ಕೇಳಿದ್ದಾರೆ. ಇಬ್ಬರೂ ಅವರವರ ಮನೆಗಳವರಿಗೆ ಒಪ್ಪಿಗೆ ಕೊಟ್ಟಿದ್ದಾರೆ. ಪ್ರೀತಿ ಎಂಗೇಜ್‍ಮೆಂಟ್ ತನಕ ಬಂದಿದೆ. ಕಚಗುಳಿ ಶುರುವಾಗಿದೆ.
Related Articles :-
ರಕ್ತಿತ್ ಶೆಟ್ಟಿ - ರಶ್ಮಿಕಾ ಲವ್ ಸ್ಟೋರಿ - ಪ್ರಪೋಸ್ ಮಾಡಿದ್ದು ಯಾರು?
ಕಿರಿಕ್ ಜೋಡಿಗೆ ಶ್ರೀರಸ್ತು ಶುಭಮಸ್ತು. ಒಪ್ಪಿಕೊಂಡರು ರಕ್ಷಿತ್ ಶೆಟ್ಟಿ