ನಮ್ಮ ಮೆಟ್ರೋದಲ್ಲಿ ಅಗತ್ಯ ಇದೆಯೋ ಇಲ್ಲವೊ ಎಂಬುದನ್ನೂ ನೋಡದೆ ಹಿಂದಿಯನ್ನು ಹೇರುತ್ತಿರುವುದು, ಇದರ ವಿರುದ್ಧ ನಾಗರಿಕರೇ ಸಾಮಾಜಿಕ ಜಾಲತಾಣಗಳ ವಿರುದ್ಧ ಮೆಟ್ರೋನಲ್ಲಿ ಹಿಂದಿ ಬೇಡ ಎಂದು ಅಭಿಯಾನ ನಡೆಸಿದ್ದು ಗೊತ್ತಿರುವ ವಿಚಾರವೇ. ಈಗ ನಾಗರಿಕರ ಹೋರಾಟಕ್ಕೆ ಇನ್ನಷ್ಟು ಬಲ ಬಂದಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ನಯವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.
ಮೆಟ್ರೋದಲ್ಲಿ ಹಿಂದಿ ಹೇರಿಕೆ ತೆಗೆಯಿರಿ. ನಮಗೆ ಹಿಂದಿ ಬೇಡ. ಕನ್ನಡಿಗರ ಮನವಿಗೆ ಸ್ಪಂದಿಸಿ ಎನ್ನುತ್ತಲೇ, ತೆಗೆಯದೇ ಹೋದರೆ ಪ್ರತಿಭಟನೆ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯೂ ಇದೆ.
ಹಿಂದಿ ವಿರೋಧಿ ಹೋರಾಟಕ್ಕೆ ಫಿಲ್ಮ್ ಚೇಂಬರ್ ಪ್ರವೇಶವಾದರೆ, ಹೆಚ್ಚೂಕಡಿಮೆ ಚಿತ್ರರಂಗವೇ ಪ್ರವೇಶವಾದಂತೆ. ಪ್ರತಿಭಟನೆಯ ಎಚ್ಚರಿಕೆಗೆ ಮೆಟ್ರೋ ಮಣಿಯುತ್ತಾ..?