ಹುಚ್ಚ ವೆಂಕಟ್ ಪ್ರೀತಿಸುತ್ತಿದ್ದ ಹುಡುಗಿ ರಚನಾ. ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಜೋಡಿ ಡ್ಯಾನ್ಸ್ ಶೋದಲ್ಲಿ ಹುಚ್ಚ ವೆಂಕಟ್ನ ಪೇರ್ ಆಗಿದ್ದವರು. ಪೊರ್ಕಿ ಹುಚ್ಚ ವೆಂಕಟ್ ಸಿನಿಮಾದಲ್ಲಿ ನಟಿಸಿದ್ದರು ಕೂಡಾ. ಈಗ ಆಕೆಯೇ ಮಾಧ್ಯಮಗಳ ಎದುರು ಬಂದು ಹೇಳಿಕೆ ನೀಡಿದ್ದಾರೆ.
ಹುಚ್ಚ ವೆಂಕಟ್ ಜೊತೆ ಡ್ಯಾನ್ಸ್ ಶೋದಲ್ಲಿ ಭಾಗವಹಿಸಿದ್ದುದು ಹೌದು. ಆದರೆ, ಆತನಿಗೂ ನನಗೂ ಮಧ್ಯೆ ಪ್ರೀತಿಯೂ ಇಲ್ಲ. ಏನೂ ಇಲ್ಲ. ಆತ ಮಹಿಳೆಯರಿಗೆ ಗೌರವ ಕೊಡುತ್ತಾನೆ ಎಂದು ಜೊತೆಯಲ್ಲಿ ಡ್ಯಾನ್ಸ್ ಮಾಡಿದ್ದೆ. ರಿಯಾಲಿಟಿ ಶೋನಲ್ಲಿ ಯಾವುದೇ ತೊಂದರೆಯಾಗಿರಲಿಲ್ಲ.
ಆದರೆ, ಈಗ ಮದುವೆಯಾಗುವಂತೆ ಬೆನ್ನು ಬಿದ್ದಿದ್ದರು. ನನಗೂ ಇಷ್ಟವಿರಲಿಲ್ಲ. ನನ್ನ ಮನೆಯವರೂ ಒಪ್ಪುವುದಿಲ್ಲ ಎಂದು ಅದನ್ನು ನಿರಾಕರಿಸಿದ್ದೆ. ಈಗ ಅವರು ಈ ಕೆಲಸ ಮಾಡಿದ್ದಾರೆ. ಅವರ ಆತ್ಮಹತ್ಯೆ ಯತ್ನಕ್ಕೂ ನನಗೂ ಸಂಬಂಧವಿಲ್ಲ. ಈ ಸುದ್ದಿ ಬಹಳ ಬೇಸರ ತರಿಸಿದೆ ಎಂದಿದ್ದಾರೆ ರಚನಾ.