` ಹುಚ್ಚ ವೆಂಕಟ್ ಆತ್ಮಹತ್ಯೆ ಯತ್ನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Huccha venkat image
Huccha venkat

ನನ್ಮಗಂದ್ ಖ್ಯಾತಿಯ ಹುಚ್ಚ ವೆಂಕಟ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಆತ್ಮಹತ್ಯೆ ಯತ್ನದ ಮೂಲಕ. ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ವೆಂಕಟ್ ರನ್ನು ಈಗ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ರಚಿತಾ ಎಂಬ ಯುವತಿಯೊಬ್ಬರನ್ನು (ಹೆಸರು ಬದಲಿಸಲಾಗಿದೆ) ಪ್ರೀತಿಸುತ್ತಿರುವ ವೆಂಕಟ್, ಪ್ರೇಮ ವೈಫಲ್ಯದಿಂದಾಗಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರಂತೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಎಲ್ಲ ಮೀಡಿಯಾದವರಿಗೂ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೆಸೇಜ್ ಮಾಡಿರುವ ಹುಚ್ಚ ವೆಂಕಟ್, ಮಲ್ಲಿಗೆ ಆಸ್ಪತ್ರೆಯಲ್ಲಿ ವೈದ್ಯರ ಜೊತೆಯಲ್ಲೂ ಜಗಳ ಮಾಡುತ್ತಿದ್ದಾರೆ. ಮದುವೆಗೂ ಒಪ್ಪಿಕೊಂಡಿದ್ದ ಯುವತಿ, ಈಗ ಫೋನ್ ಕೂಡಾ ರಿಸೀವ್ ಮಾಡುತ್ತಿಲ್ಲವಂತೆ. ಅವರಿಬ್ಬರ ಮದುವೆಗೆ ಹುಡುಗಿಯ ಕುಟುಂಬದವರು ಒಪ್ಪಿಲ್ಲವಂತೆ. ಇದಕ್ಕಾಗಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೆಸೇಜ್ ಮಾಡಿ ಫಿನಾಯಿಲ್ ಕುಡಿದಿದ್ದಾರೆ ಹುಚ್ಚ ವೆಂಕಟ್.

Following is the txt msg he has sent to media.

Media friends i am suiciding now takeing phenol as i cant forget the girl whom i loved superjodi rachana who loved me now she is saying she wil not marry me as her parents dnt agree rachana be happy i cnt leave without u rachana i love u kane tel this to her i told huccha venkat here

#

Edakallu GuddadaMele Movie Gallery

Rightbanner02_backasura_inside

Rajaratha Movie Gallery