` ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
aaka image
chiranjeevi sarja, sharmila mandre, prakash belawadi in aake

ಆಕೆ, ಚೈತನ್ಯ ನಿರ್ದೇಶನದ ಸಿನಿಮಾ. ಆ ದಿನಗಳು, ಆಟಗಾರ..ದಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಚೈತನ್ಯ, ಈಗ ಹೊಸ ಹಾರರ್ ಚಿತ್ರದೊಂದಿಗೆ ಬರುತ್ತಿದ್ದಾರೆ. ಚಿತ್ರದ ವಿಶೇಷವೆಂದರೆ, ಇದು ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್ ಚಿತ್ರ. 

ಅರ್ಧ ಭಾಗ ಲಂಡನ್​ನಲ್ಲೇ ಶೂಟಿಂಗ್ ಆಗಿದ್ದರೆ, ಉಳಿದರ್ಧ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರಕ್ಕೆ ಕೆಲಸ ಮಾಡಿರುವವಱರೂ ಹೊಸಬರಲ್ಲ. ಆದರೆ, ಘಟಾನುಘಟಿಗಳು.  ಆಕೆ ಚಿತ್ರದ ಛಾಯಾಗ್ರಾಹಕ ಇಯಾನ್ ಹಾವ್ಸ್. ಹ್ಯಾರಿ ಪಾಟರ್ ಚಿತ್ರಕ್ಕೆ ಕೆಲಸ ಮಾಡಿದ್ದವರು. ಲಂಡನ್​ನಲ್ಲಿ ಶೂಟಿಂಗ್ ಆದ ಭಾಗದ ದೃಶ್ಯಗಳ ಛಾಯಾಗ್ರಹಣ ಮಾಡಿದ್ದಾರೆ.  ಭಾರತದಲ್ಲಿ ನಡೆದಿರುವ ಶೂಟಿಂಗ್​ನಲ್ಲಿ ಕ್ಯಾಮೆರಾ ಹಿಡಿದಿರೋದು  ಮನೋಹರ್‌ ಜೋಷಿ. 

ಕಲಾ ನಿರ್ದೇಶಕ ಪಾಲ್‌ ಬರ್ನ್ಸ್‌ ಕೂಡ ಹಾಲಿವುಡ್ ಚಿತ್ರ ‘ದ ನಾಟ್‌’ತಂಡದಲ್ಲಿ ಕೆಲಸ ಮಾಡಿದವರು. ಗೇಮ್ ಆಫ್ ದಿ ಥ್ರೋನ್ಸ್ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದವರು. ಇಂಗ್ಲೆಂಡ್​ನಲ್ಲಿ ನಡೆದ ಶೂಟಿಂಗ್​ನಲ್ಲಂತೂ ಚೈತನ್ಯ ಜೊತೆಗಿದ್ದ ಇಬ್ಬರು ಅಸಿಸ್ಟೆಂಟ್​​ಗಳನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಅಲ್ಲಿನವರೇ. 

ಚೈತನ್ಯ ಅವರಿಗೇನೂ ಬ್ರಿಟನ್​ ಹೊಸದಲ್ಲ. ಅಲ್ಲಿಯೇ ಸಾಕ್ಷ್ಯಚಿತ್ರ ತಯಾರಿಸಿದ ಅನುಭವವಿದೆ. 

ಇರೋಸ್ ಇಂಟರ್​ನ್ಯಾಷನಲ್ ನಿರ್ಮಿಸುತ್ತಿರುವ ಮೊದಲ ಕನ್ನಡ ಚಿತ್ರವೂ ಆಕೆ. 

ಆಟಗಾರದಲ್ಲಿ ಚೈತನ್ಯ ಕೊಟ್ಟಿದ್ದ ಹಾರರ್ ಅನುಭವಕ್ಕೆ ಬೆಚ್ಚಿ ಬಿದ್ದಿದ್ದವರು, ಈಗ ಮತ್ತೊಮ್ಮೆ ಬೆಚ್ಚಿ ಬೀಳೋಕೆ ಸಿದ್ಧರಾಗಿದ್ದಾರೆ. ಚೈತನ್ಯ ಹೆದರಿಸೋದು ಗ್ಯಾರಂಟಿ ಅನ್ನೋ ನಂಬಿಕೆ ಪ್ರೇಕ್ಷಕರು.