` ಗಣೇಶ್ ಮನೆಯಲ್ಲಿ ಹೊಸ ದೇವದಾಸ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
devdas at ganesh house
Mungaru Male Image{top}, Devdasa at Ganesh house

ಗಣೇಶ್​ಗೂ, ದೇವದಾಸ್​ಗೂ ಅವಿನಾಭಾವ ಸಂಬಂಧ. ಅದು ಮುಂಗಾರು ಮಳೆ ಎಫೆಕ್ಟ್. ಆ ಚಿತ್ರದಲ್ಲಿ ದೇವದಾಸು ಅನ್ನೋ ಮೊಲದ ಪಾತ್ರ ತುಂಬಾನೇ ಹಿಟ್ ಆಗಿತ್ತು. ಒಂದರ್ಥದಲ್ಲಿ ದೇವದಾಸ್ ಚಿತ್ರದ ಇನ್ನೊಂದು ಪೋಷಕ ನಟ ಅಂದರೆ ತಪ್ಪಾಗಲಿಕ್ಕಿಲ್ಲ. 

ಗಣೇಶ್ ತಮ್ಮ ಮಗ ವಿಹಾನ್​ಗೆ ಒಂದು ಪುಟ್ಟ ಮೊಲವನ್ನ ಗಿಫ್ಟಾಗಿ ಕೊಟ್ಟಿದ್ದಾರೆ. ಆ ಮೊಲಕ್ಕೆ ದೇವದಾಸ್ ಅಂತಾನೇ ಹೆಸರಿಟ್ಟಿದ್ದಾರೆ.  ಮುಂಗಾರು ಮಳೆಯಲ್ಲಿ ದೇವದಾಸ್​ ಮೊಲಕ್ಕೆ ಗಣೇಶ್ ಹೊಡೆದಿದ್ದ ಡೈಲಾಗ್​ಗಳು ಹಿಟ್ ಆಗಿದ್ದವು. ಗಣೇಶ್ ಮಗ ವಿಹಾನ್ ಕೂಡಾ, ಅವನ ದೇವದಾಸ್​ಗೆ ಹಾಗೇ ಡೈಲಾಗ್ ಹೊಡೀತಾನಾ..? ಗೋಲ್ಡನ್ ಸ್ಟಾರೇ ಹೇಳಬೇಕು.