ಇದು ಪೂಜಾಗಾಂಧಿ ಮತ್ತು ಸಂಜನಾ ಅವರ ನಡುವಿನ ಜಗಳ. ವಿವಾದಕ್ಕೆ ಕಾರಣವಾಗಿದ್ದು ದಂಡುಪಾಳ್ಯ 2 ಚಿತ್ರ. ಪೂಜಾಗಾಂಧಿ ಫೇಸ್ಬುಕ್ನಲ್ಲಿ ಕೊಟ್ಟಿರುವ ಹೇಳಿಕೆಗೆ ಅದೇ ಚಿತ್ರದಲ್ಲಿ ನಟಿಸಿರುವ ಸಂಜನಾ, ವಿಡಿಯೋ ಹೇಳಿಕೆಯ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಪೂಜಾ ಅವರಂತೆಯೇ, ಸಂಜನಾ ಕೂಡಾ ಹೆಸರು ಹೇಳಿಲ್ಲ.
ಚಿತ್ರದಲ್ಲಿ ಸಂಜನಾಗೆ ನಾಯಕಿ ಪೂಜಾ ಎಂದು ಹೇಳಲಾಗಿತ್ತಾದರೂ, ಅವರಷ್ಟೇ ಪ್ರಮುಖ ಪಾತ್ರ ತಮಗೂ ಎಂದು ಹೇಳಿದ್ದರಂತೆ ನಿರ್ಮಾಪಕರು. ದಂಡುಪಾಳ್ಯ 2 ಚಿತ್ರದಲ್ಲಿ ಪೂಜಾ ಲಕ್ಷ್ಮಿ ಎಂಬ ಪಾತ್ರ ಮಾಡಿದ್ದರೆ, ಸಂಜನಾ ಅವರದ್ದು ಸಾವಿತ್ರಿ ಅನ್ನೋ ಹೆಸರಿನ ಪಾತ್ರ.
ಆಕೆಗೆ ಅಭದ್ರತೆ ಕಾಡುತ್ತಿದೆ ಅದಕ್ಕೇ ಹೀಗೆ ಹೇಳುತ್ತಿದ್ದಾರೆ - ಪೂಜಾ ಗಾಂಧಿ ಹೇಳಿದ್ದು ಯಾರಿಗೆ?
ಈಗ ಸಂಜನಾ ಹೇಳಿರೋದು ಇಷ್ಟು. ಸಂಜನಾಗೆ ಬೆಂಗಳೂರಿನಲ್ಲಿ ನಡೆದ ಚಿತ್ರದ ಪ್ರೆಸ್ಮೀಟ್ ವಿಷಯವೇ ಗೊತ್ತಿರಲಿಲ್ಲ. ಆದರೆ, ಅದಾದ ಮರುದಿನ ಹೈದರಾಬಾದ್ನ ಪ್ರೆಸ್ಮೀಟ್ಗೆ ಕರೆದರು. ನಿರ್ಮಾಪರಕ ಜೊತೆ ಕೂಡಾ ನಾನು ಮಾತನಾಡಿದ್ದೇನೆ. ಅವರಿಗೆ ಚಿತ್ರೀಕರಣದ ವೇಳೆ ಸಣ್ಣ ತೊಂದರೆಯನ್ನೂ ಕೊಟ್ಟಿಲ್ಲ. ಆದರೆ, ನನ್ನನ್ನು ಕಡೆಗಣಿಸಿರುವುದು ಏಕೆ ಎಂದಾಗ ಅಹಂಕಾರದ ಉತ್ತರ ಕೊಟ್ಟರು. ಹೀಗಾಗಿ ನಾನು ದಂಡುಪಾಳ್ಯ ಪ್ರಮೋಷನ್ಗೆ ಹೋಗುತ್ತಿಲ್ಲ.
ಯಾರದೋ ಒಬ್ಬರ ಹಿತಕ್ಕಾಗಿ, ಇನ್ನೊಬ್ಬರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ನಾನೇನು ಖಾಲಿ ಕುಳಿತಿಲ್ಲ. ನನ್ನ ಕೈಲಿ ಕೂಡಾ ಮೂರು ಚಿತ್ರಗಳಿವೆ. ಆ ಚಿತ್ರದಿಂದ ಅವರಿಗೆ ಪ್ರಚಾರ ಸಿಗುತ್ತೆ ಎಂದಾದರೆ ಸಿಗಲಿ ಬಿಡಿ. ನಾನು ಕನ್ನಡ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಬ್ಯುಸಿ ಎಂದಿದ್ದಾರೆ. ಸಂಜನಾ ಅವರ ಅಷ್ಟೂ ಮಾತುಗಳಲ್ಲಿ ಪೂಜಾ ಗಾಂಧಿಯ ವಿರುದ್ಧ ಸಿಟ್ಟು ಎದ್ದು ಕಾಣುತ್ತದಾದರೂ, ಎಲ್ಲಿಯೂ ಪೂಜಾಗಾಂಧಿ ಹೆಸರು ಹೇಳಿಲ್ಲ ಅನ್ನೋದೇ ವಿಶೇಷ.
ದಂಡುಪಾಳ್ಯ 2 ಚಿತ್ರ ಶುರುವಾದಾಗಿನಿಂದಲೂ ಅದೇಕೋ ಏನೋ..ವಿವಾದಗಳಿಂದಲೇ ಸುದ್ದಿಯಾಗುತ್ತಿದೆ.
Related Articles :-
ಆಕೆಗೆ ಅಭದ್ರತೆ ಕಾಡುತ್ತಿದೆ ಅದಕ್ಕೇ ಹೀಗೆ ಹೇಳುತ್ತಿದ್ದಾರೆ - ಪೂಜಾ ಗಾಂಧಿ ಹೇಳಿದ್ದು ಯಾರಿಗೆ?