Print 
engagement, yogi, sahitya,

User Rating: 0 / 5

Star inactiveStar inactiveStar inactiveStar inactiveStar inactive
 
yogi sahitya image
Sahitya, Yogi Image

ಇತ್ತೀಚೆಗೆ ಸ್ಯಾಂಡಲ್​ವುಡ್​ನಲ್ಲಿ ಗಟ್ಟಿಮೇಳಗಳ ಸದ್ದು ಜೋರಾಗಿದೆ. ಆ ಸಾಲಿಗೆ ಈಗ ಲೂಸ್ ಮಾದ ಖ್ಯಾತಿಯ ಯೋಗಿ ಹೊಸ ಸೇರ್ಪಡೆ. ಜೂನ್ 11ರಂದು ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅರಸ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಮದುವೆ ನವೆಂಬರ್​ 2ಕ್ಕೆ. 

ಸಾಹಿತ್ಯ ಅರಸ್, ಯೋಗಿಗೆ ಬಾಲ್ಯದ ಗೆಳತಿ. ಸದ್ಯಕ್ಕೆ ಐಟಿ ಉದ್ಯೋಗಿ. ಬಾಲ್ಯದಿಂದಲೇ ಸ್ನೇಹವಿತ್ತು. ಸ್ನೇಹ ಪ್ರೀತಿಯಾಯ್ತು. ಹಲವು ವರ್ಷಗಳ ಪ್ರೀತಿ ಮಾಗಿ ಮದುವೆಯ ಹಂತಕ್ಕೆ ಬಂತು. ಮನೆಯವರೂ ಒಪ್ಪಿ, ಈಗ ಮದುವೆಯ ಹಂತದಲ್ಲಿದೆ.

ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹತ್ತಿರದ ಸಂಬಂಧಿಗಳಿಗೆ ಮತ್ತು ಚಿತ್ರರಂಗದ ಆಪ್ತ ಗೆಳೆಯರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. ಅಂದಹಾಗೆ ಯೋಗಿಯ ಭಾವೀಪತ್ನಿ ಸಾಹಿತ್ಯ ಅರಸ್​ಗೂ, ಸಿನಿಮಾರಂಗಕ್ಕೂ ಯಾವುದೇ ಸಂಬಂಧವಿಲ್ಲ.

ಮದುವೆಗೆ ಛತ್ರವೂ ಬುಕ್ ಆಗಿದೆ. ಮುಹೂರ್ತವೂ ಫಿಕ್ಸ್ ಆಗಿದೆ. ಶುಭ ಹಾರೈಸೋಣ.