ಗಾಂಧಿನಗರದಲ್ಲಿ ದಂಡುಪಾಳ್ಯ 2 ಚಿತ್ರದ ಪ್ರಚಾರಕ್ಕೆ ನನ್ನ ಕರೆಯುತ್ತಿಲ್ಲ. ಚಿತ್ರದ ಟ್ರೇಲರ್ನಲ್ಲೂ ನಾನಿಲ್ಲ ಅಂತಾ ನಟಿ ಸಂಜನಾ ಕೂಡಾ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ರು. ಹೇಗೇ ಹೇಳಿದ್ದರೂ, ಅವರ ಗುರಿ ಪೂಜಾಗಾಂಧಿಯೇ ಆಗಿದ್ದರು. ಸಾಕಷ್ಟು ಸುದ್ದಿಯಾಗಿದ್ದ ಸಂಜನಾ ಸ್ಟೇಟ್ಮೆಂಟ್ಗೆ, ಅದೇ ಮಾದರಿಯಲ್ಲಿ ಉತ್ತರ ಕೊಟ್ಟಿದ್ದಾರೆ ಪೂಜಾ.
ಬೇರೆಯವರನ್ನು ತುಳಿದು ಬೆಳೆಯುವ ಪರಿಸ್ಥಿತಿ ಅಥವಾ ಉದ್ದೇಶ ನನಗಿಲ್ಲ. ನನಗೆ ನನ್ನದೇ ಆದ ಜವಾಬ್ದಾರಿ, ಹೊಣೆಗಳಿವೆ. ಒಟ್ಟಿಗೇ ಮೂರು ಸಿನಿಮಾ ನಿರ್ಮಿಸುತ್ತಿದ್ದೇನೆ. ಆ ಕೆಲಸಕ್ಕೇ ನನಗೆ ಟೈಂ ಸಿಗ್ತಾ ಇಲ್ಲ. ಹೀಗಿರುವಾಗ ಚಿತ್ರದ ನಿರ್ದೇಶಕರು, ನಿರ್ಮಾಪಕರಿಗೆ ಒತ್ತಡ ಹೇರುವಷ್ಟು ಪುರುಸೊತ್ತೂ ನನಗಿಲ್ಲ ಎಂದಿದ್ದಾರೆ.
ದಂಡುಪಾಳ್ಯ 2 ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದೇನೆ. ನಾನು ಒಳ್ಳೆಯ ನಟಿ ಎಂದು ನನಗೂ ಗೊತ್ತಿದೆ. ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ‘ಆಕೆ’ಗೆ ಅಸುರಕ್ಷತೆ, ಅಭದ್ರತೆ ಕಾಡುತ್ತಿದೆ. ಅದಕ್ಕೇ ಹೀಗೆ ಹೇಳಿದ್ದಾರೆ. ನಾನು ಏನೇ ಹೇಳಿದರೂ, ಆಕೆಗೆ ಇದೆಲ್ಲ ಅರ್ಥವಾಗುವುದಿಲ್ಲ ಎಂದಿದ್ದಾರೆ ಪೂಜಾ ಗಾಂಧಿ.
ತಮ್ಮ ಫೇಸ್ಬುಕ್ನಲ್ಲಿ ಸುದೀರ್ಘ ಸ್ಪಷ್ಟನೆ ಕೊಟ್ಟಿರುವ ಪೂಜಾ, ಎಲ್ಲಿಯೂ ಸಂಜನಾ ಹೆಸರು ಹೇಳಿಲ್ಲ ಅನ್ನೋದು ವಿಶೇಷ.