` ‘MLA’ ಬಿಗ್​ಬಾಸ್ ಪ್ರಥಮ್​ಗೆ ಸಿಎಂ ಆಶೀರ್ವಾದ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
mla launch image
MLA launched by CM Siddaramaiah

ಬಿಗ್ ಬಾಸ್ ಪ್ರಥಮ್ ಈಗ 'ಎಂಎಲ್ಎ' ಆಗಲಿದ್ದಾರೆ. ಏನಪ್ಪಾ ಇದು, ಪ್ರಥಮ್ ಯಾವಾಗ ಎಂಎಲ್​ಎ ಆದ್ರು ಅಂತಾ ಕನ್​ಫ್ಯೂಸ್ ಆಗ್ಬೇಡಿ. ಅದು ಬಿಗ್​ಬಾಸ್ ಖ್ಯಾತಿಯ ಪ್ರಥಮ್ ಅಭಿನಯಿಸ್ತಾ ಇರೋ ಚಿತ್ರದ ಹೆಸರು. 

ಈ ರೀಲ್ ಎಂಎಲ್​ಎ ಚಿತ್ರದ ಮುಹೂರ್ತಕ್ಕೆ ಕ್ಲಾಪ್ ಮಾಡಿರುವುದು ಸಿಎಂ ಸಿದ್ದರಾಮಯ್ಯ. ಕಂಠೀರವ ಸ್ಟುಡಿಯೊದಲ್ಲಿ ನಡೆದ ಎಂಎಲ್​ಎ ಚಿತ್ರದ ಮುಹೂರ್ತಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಆಗಮಿಸಿ ಶುಭ ಹಾರೈಸಿದ್ದೇ ವಿಶೇಷ.

ಹಾಲಿ ಮುಖ್ಯಮಂತ್ರಿಯ ಆಶೀರ್ವಾದ ಬಲದೊಂದಿಗೆ ತೆರೆಗೆ ಬರುತ್ತಿರುವ ಚಿತ್ರದ ನಿರ್ದೇಶಕ ಮಂಜು ಮೌರ್ಯ. ನಿಜವಾದ ರಾಜಕಾರಣಿ ಹೇಗಿರಬೇಕು ಅನ್ನೋದನ್ನ ಸಿನಿಮಾದಲ್ಲಿ ಸಿಕ್ಕಾಪಟ್ಟೆ ತಮಾಷೆಯಾಗಿ ಹೇಳ್ತಾರಂತೆ. ಹಾಗೆಂದು ರಾಜಕೀಯ ವಿಡಂಬನೆಯ ಚಿತ್ರವೂ ಇದಲ್ಲವಂತೆ. 

ತ್ರಿವೇಣಿ ಎಂಟರ್ ಪ್ರೈಸಸ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ 'ಎಂಎಲ್ಎ' ಚಿತ್ರಕ್ಕೆ ಸೋನಲ್ ಅನ್ನೋ ನಟಿ ಹೀರೋಯಿನ್