ಕಿರುತೆಯಲ್ಲಿ ವೀಕೆಂಡ್ ವಿತ್ ರಮೇಶ್ ಸಾಧಕರ ಪರಿಚಯ ಮಾಡಿಕೊಡುತ್ತಾ ಹಿಟ್ ಆದ ಕಾರ್ಯಕ್ರಮ. ಝೀ ಕನ್ನಡದ ವೀಕೆಂಡ್ ವಿತ್ ರಮೇಶ್, ರಮೇಶ್ ಅವರಿಂದ್ಗೆ ಹೊಸ ಇಮೇಜ್ ಕೊಟ್ಟಿದೆ. ಇದುವರೆಗೆ ಈ ಕಾರ್ಯಕ್ರಮದ ಸಾಧಕರ ಕುರ್ಚಿಯಲ್ಲಿ ಸಿನಿಮಾ, ರಂಗಭೂಮಿ, ಮಾಧ್ಯಮದವರೇ ಇದ್ದರು. ಸಿನಿಮಾದವರಷ್ಟೇ ಸಾಧಕರಾ ಅಂತಾ ವೀಕ್ಷಕರು ಕೇಳುತ್ತಲೇ ಇದ್ದರು. ಅದಕ್ಕೆಲ್ಲ ಉತ್ತರವೆಂಬಂತೆ ಈ ವಾರದ ವೀಕೆಂಡ್ ವಿತ್ ಅತಿಥಿ ಮಾಜಿ ಪ್ರಧಾನಿ ದೇವೇಗೌಡ.
ದೇವೇಗೌಡರ ರಾಜಕೀಯದ ಬಗ್ಗೆ ರಾಜ್ಯದ ಬಹುತೇಕ ಜನರಿಗೆ ಗೊತ್ತು. ಆದರೆ, ಈ ಕಾರ್ಯಕ್ರಮದಲ್ಲಿ ರಾಜಕೀಯ ಹೊರತಾದ ದೇವೇಗೌಡರ ವೈಯಕ್ತಿಕ ಸಂಗತಿಗಳು ಬಹಿರಂಗವಾಗಲಿವೆಯಂತೆ. ಅದರಲ್ಲಿ ಒಂದು, ಪಂಜಾಬ್ನಲ್ಲಿ ಒಂದು ಭತ್ತದ ತಳಿಗೆ ದೇವೇಗೌಡ ಭತ್ತ ಅಂತಾ ರೈತರೇ ನಾಮಕರಣ ಮಾಡಿದ್ದಾರೆ. ಇದು ಕೆಲವೇ ಜನರಿಗೆ ಗೊತ್ತಿದ್ದ ವಿಶೇಷ ಮಾಹಿತಿ.
ದೇವೇಗೌಡರು ನಗೊಲ್ಲ ಯಾಕೆ ಅನ್ನೋ ಪ್ರಶ್ನೆ ಕೇಳುತ್ತಲೇ, ದೇವೇಗೌಡರು ನಕ್ಕಿರುವ ಪ್ರೋಮೋ, ಈಗಾಗಲೇ ಜನಪ್ರಿಯವಾಗುತ್ತಿದೆ. ದೇವೇಗೌಡರ ಜೊತೆಗಿನ ಈ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಎರಡೂ ದಿನ ಪ್ರಸಾರವಾಗಲಿದೆ.
ದೇವೇಗೌಡರ ಯಾವ್ಯಾವ ವಿಶೇಷಗಳು ವೀಕೆಂಡ್ ವಿತ್ ರಮೇಶ್ನಲ್ಲಿ ಹೊರಬೀಳಲಿವೆ. ಕುತೂಹಲದಿಂದ ಕಾಯುತ್ತಿದ್ದಾರೆ ವೀಕ್ಷಕರು.