ಕೆ.ಪಿ. ನಂಜುಂಡಿ ಎಂದರೆ ಕನ್ನಡಿಗರಿಗೆ ಚಿನ್ನದ ವ್ಯಾಪಾರಿಯಾಗಿ, ವಿಶ್ವಕರ್ಮ ಸಮುದಾಯದ ನಾಯಕರಾಗಿ ಗೊತ್ತು. ಆದರೆ, ಅವರು ನಟರೂ ಹೌದು. ಬರೋಬ್ಬರಿ 12 ವರ್ಷಗಳ ನಂತರ ಕೆ.ಪಿ. ನಂಜುಂಡಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅದು ಕನಕ ಚಿತ್ರಕ್ಕಾಗಿ.
ಕನಕ ಆರ್.ಚಂದ್ರು ನಿರ್ದೇಶನದ, ದುನಿಯಾ ವಿಜಿ ಅಭಿನಯದ ಸಿನಿಮಾ. ದುನಿಯಾ ವಿಜಿ ಎದುರಿಗೆ ನಾಯಕಿಯರಾಗಿ ಕೆಂಡಸಂಪಿಗೆಯ ಮಾನ್ವಿತಾ ಮತ್ತು ರಚಿತಾ ರಾಮ್ ಇದ್ದಾರೆ. ಈ ಇಬ್ಬರು ನಾಯಕಿಯರಲ್ಲಿ ಮಾನ್ವಿತಾಗೆ ಕೆ.ಪಿ. ನಂಜುಂಡಿ ತಂದೆಯ ಪಾತ್ರ ಮಾಡಲಿದ್ದಾರೆ. ಹೀರೋಯಿನ್ ತಂದೆಯ ಪಾತ್ರಕ್ಕೂ, ಬಾಡಿಬಿಲ್ಡಿಂಗ್, ಸಿಕ್ಸ್ಪ್ಯಾಕ್ಗೂ ಏನು ನಂಟು ಅನ್ನೋದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.
ನಂಜುಂಡಿ, ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಎಸ್. ನಾರಾಯಣ್ ಧಾರಾವಾಹಿಗಳಲ್ಲಿ. ಅಂಬಿಕಾ, ಪಾರ್ವತಿ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದ ಕೆ.ಪಿ. ನಂಜುಂಡಿ ನಟಿಸಿದ್ದ ಕೊನೆಯ ಚಿತ್ರ ಲವ್ ಯು.
ಈಗ 12 ವರ್ಷಗಳ ನಂತರ ಸಿಕ್ಸ್ಪ್ಯಾಕ್ ಕೂಡಾ ಮಾಡಿಸಿಕೊಂಡು ಬಣ್ಣ ಹಚ್ಚುತ್ತಿದ್ದಾರೆ ನಂಜುಂಡಿ. ಕನಕ ಚಿತ್ರದ ಡೈರೆಕ್ಟರ್ ಆರ್. ಚಂದ್ರು ಎಸ್.ನಾರಾಯಣ್ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದವರು. ಆಗಿನ ಪರಿಚಯವೇ ಈಗ ಬಣ್ಣ ಹಚ್ಚಲು ಕಾರಣವಂತೆ.
ಸಂಬಂಧಿಸಿದ ಲೇಖನಗಳು ಓದಿರಿ :-