` Censor Board Inside Story 3 - Writes SM Patil - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
censor natasha dsouza image
sm patil, natasha dsouza

ನಾನು ಪಟ್ಟು ಬಿಡಲಿಲ್ಲ, ಮಾಹಿತಿ ಹಕ್ಕು ಕಾಯ್ದೆಯ ಅಡಿ ಆದೇಶ ಪ್ರತಿ ಕೇಳಿದೆ. ಆಗ ನತಾಷೆ ನನಗೆ ಕೊಟ್ಟ ಉತ್ತರ ‘ನಿಮ್ಮ ಟರ್ಮ ಮುಗಿದು ಹೊಗಿದೆ’ ಅನ್ನೊದು. ಅದೂ ಸುಳ್ಳು. ಸತ್ಯ ಎಂದರೆ ನನ್ನ ಟರ್ಮ ಇನ್ನೂ ಮುಗಿದಿಲ್ಲ. ನಮ್ಮ ಜೊತೆಗಿದ್ದ ಇನ್ನುಳಿದ 16 ಸದಸ್ಯರು ಈಗಲೂ ಸದಸ್ಯರಾಗಿ ಮುಂದುವರೆದಿದ್ದಾರೆ. ನನಗೆ ಕಳೆದ ವರ್ಷ ಮಿನಿಸ್ಟರಿಯಿಂದ ಬಂದ ಆರ್ಡರ್ನ.ಲ್ಲಿ ‘ಮುಂದಿನ ಆಧೇಶದ ವರೆಗೆ ನಾವು ಮುಂದುವರೆಯಬೇಕು’ ಅಂತ ಇದೆ. ಅದನ್ನೂ ಸರಿಯಾಗಿ ಓದದೇ ಆದೇಶ ಬರುವುದಕ್ಕೂ ಮುನ್ನವೇ ‘ನಿಮ್ಮನ್ನು ತೆಗೆದು ಹಾಕಲಾಗಿದೆ ಎಂದು ನತಾಷಾ ಉಡಾಫೆಯಿಂದ ಉತ್ತರಿಸಿದ್ದಾರೆ! 

ಹಿಂದಿನ ಅಧಿಕಾರಿಗಳಿಂದ ಭೇಷ್ ಎನಿಸಿಕೊಂಡಿರುವ ನಾನು ಯಾವುದೇ ಮಂತ್ರಿಗಳ ಮೂಲಕ ಸದಸ್ಯನಾಗಿ ಬಂದವನಲ್ಲ. ವಿದೇಶಿ ಚಿತ್ರಗಳ ಬಗ್ಗೆ ರೂಪತಾರಾದಲ್ಲಿ ನನ್ನ ಅಂಕಣ ಓದಿ ಆಗಿನ ಸಂಪಾದಕರಾಗಿದ್ದವರನ್ನು ವಿಚಾರಿಸಿ ನಾನು ಚಿತ್ರಗಳ ಬಗ್ಗೆ ಸಮರ್ಥವಾಗಿ ಮಾತಾನಾಡುತ್ತೇನೆ ಎಂಬ ಬಗ್ಗೆ ತಿಳಿದುಕೊಂಡು ನನ್ನನ್ನು ಸಿ.ಆರ್ ಚಂದ್ರಶೇಖರ್ ಸದಸ್ಯನಾಗಿ ಆಯ್ಕೆ ಮಾಡಿಕೊಂಡಿದ್ದರು. ನಂತರದ ಅಧಿಕಾರಿಗಳು ಸಹ ನನ್ನ ಕಾರ್ಯ ಮೆಚ್ಚಿಕೊಂಡಿದ್ದು ತಾವಾಗಿಯೇ ನನ್ನ ಸದಸ್ಯತ್ವವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಆ ಹೆಮ್ಮೆ ನನಗಿದೆ, ಆದ್ದರಿಂದ ನಾನು ಹೋರಾಟ ಇನ್ನೂ ಬಿಟ್ಟಿಲ್ಲ, ಮುಂದುವರೆಸಿದ್ದೇನೆ. ಲಾಭ ನಷ್ಟದ ಪ್ರಶ್ನೆ ಇದರಲ್ಲಿಲ್ಲ. ಗೌರವ ಸ್ವಾಭಿಮಾನದ ಪ್ರಶ್ನೆ ಹೆಚ್ಚಾಗಿದೆ. ಕನ್ನಡ ಬರದೇ ಕನ್ನಡಿಗರನ್ನು ಆಟ ಆಡಿಸುತ್ತಿರುವ ನತಾಷಾ ಮೆಡಂಗೆ ತಕ್ಕ ಉತ್ತರ ಕೊಡಲು ನನ್ನ ಶಕ್ತಿಗನುಸಾರವಾಗಿ ಪ್ರಯತ್ನಿಸುತ್ತಿದ್ದೇನೆ. ಒಬ್ಬ ಕನ್ನಡಿಗನಾಗಿ ಅದು ನನ್ನ ಕರ್ತವ್ಯ ಎಂದೂ ಭಾವಿಸಿದ್ದೇನೆ.

chitraloka_group1.gif

ತನ್ನದೇ ದೊಣಿಗೆ ತೂತು ಹಾಕಿಕೊಂಡು ಪ್ರಯಾಣ ಹೊರಟಿರುವ ನತಾಷಾ ಡಿಸೊಜಾ ಎಂಬ ಈ ಅಧಿಕಾರಿಯ ಬಗ್ಗೆ ಹಲವಷ್ಟು ಅನುಮಾನಾಸ್ಪದ ಮಾಹಿತಿ ಕಲೆ ಹಾಕಿದ್ದೇನೆ, 

1] ಇವರು ಅಧಿಕಾರಕ್ಕೆ ಬಂದಿದ್ದು ಮುಖ್ಯ ಕಾರ್ಯಾಲಯಕ್ಕೆ ‘ತನಗೆ ಕನ್ನಡ ಬರುತ್ತದೆ’ ಎಂಬ ಸುಳ್ಳು ಮಾಹಿತಿ ನೀಡಿ. ಇಲ್ಲವಾದಲ್ಲಿ ಕನ್ನಡ ಚಿತ್ರಗಳ ವೀಕ್ಷಣೆಗೆ ಕನ್ನಡವೇ ಬರದ ಅಧಿಕಾರಿಯನ್ನು ಕಳಿಸುವ ದಡ್ಡತನ ಯಾವ ಕೆಂದ್ರದ ಮಂತ್ರಿ ಕಾರ್ಯಾಲಯವೂ ಮಾಡಲಾರದು.

2] ಹಲವು ಸದಸ್ಯರುಗಳನ್ನಷ್ಟೇ ಅನೇಕ ಚಿತ್ರಗಳಿಗೆ ಕರೆಯಲಾಗುತ್ತಿದ್ದು ಮತ್ತೆ ಕೆಲವು ಸದಸ್ಯರುಗಳಿಗೆ ನೆಪ ಮಾತ್ರಕ್ಕೆ ಕರೆಯುತ್ತಿದ್ದಾರೆ.

3] ಚಿತ್ರರಂಗದ ಕೆಲವು ಮುಖಂಡರು ನತಾಷಾ ಮೇಡಂ ಬೆಂಬಲಕ್ಕೆ ನಿಂತಿದ್ದು ಅವರವರ ಸ್ವ ಹಿತಾಸಕ್ತಿ ಸಹ ಅದಕ್ಕೆ ಕಾರಣವಾಗಿದೆ. ಮುಂದೆ ಬರುವ ಚಿತ್ರಗಳನ್ನು ವೀಕ್ಷಿಸಿದಲ್ಲಿ ಇದರ ಪರಿಣಾಮ ಕಾಣಿಸುತ್ತದೆ. 

5] ಬಾಬು ಎಂಬ ಮಲೆಯಾಳಿ ಸರಿಯಾಗಿ ಕೆಲಸ ನಿರ್ವಹಿಸದೆ ಅನೇಕರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದು ಸೆನ್ಸಾರ್ ಬೋರ್ಡ ಇವರಪ್ಪನ ಮನೆ ಎಂಬಂತೆ ವರ್ತಿಸುತ್ತಿದ್ದಾನೆ

ಇಲ್ಲಿಯವರೆಗೆ ಘನತೆ ಗೌರವದಿಂದ ಚಿತ್ರರಂಗದ ಜೊತೆಗೆ ಸ್ಪಂಧಿಸುತ್ತಿದ್ದ ನಮ್ಮ ಸೆನ್ಸಾರ್ ಬೋರ್ಡ ಹೀಗೆ ಅಜ್ನಾನಿಯಂತೆ ವರ್ತಿಸುತ್ತಿದ್ದುದನ್ನು ಕಂಡು ಮನಸ್ಸು ಭಾರವಾಗಿದ್ದು, ಬಹಳಷ್ಟು ಬೇಸರವೂ ಮೂಡಿದೆ. 

ಲೇಖನ ಅಲ್ಲಲ್ಲಿ ವಿಡಂಬನಾತ್ಮಕವಾಗಿ, ವ್ಯಂಗ್ಯವಾಗಿದ್ದರೂ ಸಹ ಆದಷ್ಟು ಬೇಗ ಇವರೆಲ್ಲಾ ತೊಲಗಿ ಸೆನ್ಸಾರ್ ಬೋರ್ಡ ಕಳೆದುಕೊಂಡ ತನ್ನ ಗೌರವ ಮತ್ತೆ ಸಂಪಾದಿಸಲಿ ಎಂಬ ಕಾಳಜಿ ಮಾತ್ರ ಈ ಲೇಖನದ ಹಿಂದಿದೆ. ದಯವಿಟ್ಟು ತಪ್ಪಾಗಿ ಭಾವಿಸಬೇಡಿ. 

Censor Officer's 6 Wrongs

ಸೆನ್ಸಾರ್ ಒಳ್ಳೆಯ ಚಿತ್ರಗಳಿಗೆ ಪರೋಕ್ಷವಾಗಿ ಹೇಗೆ ಸಹಾಯಕವಾಗಿ ಕೆಲಸ ಮಾಡುತ್ತದೆ ಎಂಬ ಬಗ್ಗೆ ಒಂದಷ್ಟು ಮಾಹಿತಿ. 

1] ಸರಕಾರ ಒಂದು ಚಿತ್ರಕ್ಕೆ 10 ಲಕ್ಷದ ಸಬ್ಸಿಡಿ ನೀಡುತ್ತದೆ. ಇದನ್ನು ಪಡೆದುಕೊಳ್ಳಲು ಕೆಲವರು 4 ರಿಂದ 5 ಲಕ್ಷದಲ್ಲಿ ಚಿತ್ರವನ್ನು ಸುತ್ತಿಕೊಂಡು ಬರುತ್ತಾರೆ. ಇಂಥ ಚಿತ್ರ ವೀಕ್ಷಣೆಗೆ ಯೋಗ್ಯವಾಗಿರದೆ ಚಿತ್ರ ಸಿನಿಮಾ ರೂಪದಲ್ಲಿಯೇ ಇರೊದಿಲ್ಲ. ಇಂಥ ಚಿತ್ರಗಳು ಹೊರಬಂದು ಸಬ್ಸಿಡಿ ತೆಗೆದುಕೊಂಡಾಗ ಯೊಗ್ಯತೆ ಇರುವ ಚಿತ್ರಗಳು ಸಬ್ಸಿಡಿ ವಂಚಿತಗೊಳ್ಳುತ್ತವೆ, ಆಗ ಒಳ್ಳೆಯ ಚಿತ್ರ ನಿರ್ಮಾಪಕನಿಗೆ ಅನ್ಯಾಯವಾಗುತ್ತದೆ, ಇಂಥ ಚಿತ್ರಗಳನ್ನು ಸೆನ್ಸಾರ್ ರೆಫ್ಯೂಸಲ್ ಅಥವಾ ಅದರ್ಸ್ ಕೆಟೆಗರಿಯ ಸರ್ಟಿಫಿಕೇಟು ನೀಡುತ್ತದೆ.[ತಿರಸ್ಕರಿಸುತ್ತದೆ]

2] ಮಕ್ಕಳ ಚಲನ ಚಿತ್ರಕ್ಕೆ ಸರಕಾರ 25 ಲಕ್ಷಗಳ ಸಬ್ಸಿಡಿ ನೀಡುತ್ತಿದ್ದು ವರ್ಷಕ್ಕೆ ನಾಲ್ಕು ಚಿತ್ರಗಳು ಮಾತ್ರ ಇದರ ಲಾಭ ಪಡೆಯಬಹುದಾಗಿದೆ. ಇಲ್ಲಿಯೂ ಕೆಲವು ನಿರ್ಮಾಪಕರು ಕೆಲವು ಮಕ್ಕಳನ್ನು ಇಟ್ಟುಕೊಂಡು ಕೆಲ ಲಕ್ಷಗಳಲ್ಲಿ ಕಳಪೆ ಚಿತ್ರ ತಯಾರಿಸಿಕೊಂಡು ಬರುತ್ತಾರೆ. ಅದರಿಂದ ಇತರ ಅತ್ಯುತ್ತಮ ಮಕ್ಕಳ ಚಿತ್ರಗಳ ನಿರ್ಮಾಪಕರಿಗೆ ಸಬ್ಸಿಡಿ ಸಿಕ್ಕದೆ ಅನ್ಯಾಯವಾಗುತ್ತದೆ. ಇಂಥಾ ಚಿತ್ರಗಳಿಗೆ ಸೆನ್ಸಾರ್ ಬೋರ್ಡ ಮಕ್ಕಳ ಚಿತ್ರ ಎಂಬ ಸರ್ಟಿಫಿಕೇಟನ್ನು ನೀಡಲು ನಿರಾಕರಿಸುತ್ತದೆ. ಅದರಿಂದ ಉತ್ತಮ ಮಕ್ಕಳ ಚಿತ್ರಗಳಿಗೆ ಸಬ್ಸಿಡಿ ಸಿಕ್ಕು ಮಕ್ಕಳ ಚಿತ್ರವನ್ನು ಸರಿಯಾಗಿ ನಿರ್ಮಿಸಿದ ನಿರ್ಮಾಕರಿಗೆ ನ್ಯಾಯ ಒದಗಿಸಿದಂತಾಗುತ್ತದೆ.

3] ಯಾವುದೇ ಚಿತ್ರದಲ್ಲಿ ಪ್ರತಿಭೆ, ಕಲೆ, ಸಾಹಿತ್ಯ, ಸಾಮಾಜಿಕ ಹಿತಾಸಕ್ತಿ, ಮನೊರಂಜನೆ ಹಿನ್ನಲೆಯಾಗಿರಬೇಕೇ ಸ್ವಂತ ಹಿತಾಸಕ್ತಿ ಅದರಲ್ಲಿ ಇರಬಾರದು, ಒಬ್ಬ ಮಂತ್ರಿಯ ಬೆಂಬಲಿಗ ಚಿತ್ರ ನಿರ್ಮಿಸಿದರೆ ಅದರಲ್ಲಿ ಆತನ ವಿರೋಧಿಯನ್ನು ಹೀಯಾಳಿಸಿರುತ್ತಾನೆ, ಅದೇ ರೀತಿ ಒಬ್ಬ ನಟನ ಚಿತ್ರದಲ್ಲಿ ಮತ್ತೊಬ್ಬ ನಟನಿಗೆ ಅವಮಾನಿಸಲಾಗಿರುತ್ತದೆ, ಒಂದು ಜಾತಿಯವರು ಮತ್ತೊಂದು ಜಾತಿಯನ್ನೂ ಅವಮಾನಿಸಿರುತ್ತಾರೆ. ಅಷ್ಟೇ ಯಾಕೆ ದೇವರನ್ನೂ ಸಹ ನಿಂದಿಸಿದ ಉದಾಹರಣೆಗಳು ಇವೆ. ಅಂಗವಿಕಲರನ್ನು ಸಹ ಹೀನಾಯವಾಗಿ ಹಿಯಾಳಿಸಿದ್ದನ್ನೂ ನೊಡಿದ್ದೇನೆ. ಇತ್ತಿಚೆಗೆ ಒಂದು ಚಿತ್ರದಲ್ಲಿ ಅನಾಥಾಶ್ರಮದ ಮಕ್ಕಳಿಗೆ ಅ ಎಂದರೆ ಅಮ್ಮ ಎಂದು ಹೇಳಿಕೊಡುವುದಿಲ್ಲ ಯಾಕೆಂದರೆ ಮಕ್ಕಳಿಗೆ ಅಮ್ಮ ಇರೊದಿಲ್ಲ ಅಂತ ಎಂದು ಹೇಳಿಸಿದ್ದರು. ಕ್ರಿಯೇಟಿವಿಟಿ ಏನೇ ಇದ್ದರೂ ಇಂಥ ದೃಷ್ಯ ಕಂಡಾಗ ಅನಾಥಾಶ್ರಮದ ಮಕ್ಕಳಿಗೆ ನೋವಾಗುತ್ತದೆ ಆದ್ದರಿಂದ ಅದನ್ನು ತೆಗೆದುಹಾಕಲಾಯಿತು. ಚೆಕ್ಕಾ ಎಂಬ ಪದವನ್ನು ಬಯ್ಗಳಿನ ರೂಪದಲ್ಲಿ ಬಳಸಬಾರದೆಂದು ಮಂಗಳ ಮುಖಿಯರು ಸೆನ್ಸಾರ್ ಆಫಿಸಿಗೆ ಬಂದು ಕೊರಿಕೆ ಸಲ್ಲಿಸಿ ಅದರಿಂದ ತಮಗೆ ಅವಮಾನವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ, ಆದ್ದರಿಂದ ಆ ಪದವನ್ನು ಈಗ ಬಿಡುತ್ತಿಲ್ಲ. ಅದರ ಬದಲು ಶಿಖಂಡಿ ಎಂದು ಬದಲಾಯಿಸಿಕೊಳ್ಳಲು ಸೂಚಿಸಲಾಗುತ್ತಿದೆ. ಅರ್ಥ ಒಂದೇ ಆದರೂ ಪರಿಣಾಮ ನೋಡಿ ಬಿಡಬೇಕಾದ್ದು ಸಹ ಸೆನ್ಸಾರ್ ಬೊರ್ಡಿನ ಹೊಣೆ ಆಗಿರುತ್ತದೆ. ಮುಂಡೆ ಎನ್ನುವ ಪದ ಆಗಲಿ, ಹಜಾಮ ಎನ್ನುವ ಪದವಾಗಲಿ ಬಯ್ಗುಳದ ರೂಪದಲ್ಲಿ ಬಳಸೊಹಾಗಿಲ್ಲ. ಆ ಪದಕ್ಕೆ ಸಂಬಂಧ ಪಟ್ಟ ಜನಕ್ಕೆ ನೋವಾಗುತ್ತದೆ ಎನ್ನುವುದು ಸರಕಾರದ ಉದ್ದೇಶ. ಹಣ ಕೊಟ್ಟು ಎಲ್ಲರೂ ನೊಡುತ್ತಾರಾದ್ದರಿಂದ ಯಾವುದೇ ವರ್ಗದ ಜನಕ್ಕೆ ಮುಜುಗರ ಅಥವಾ ನೊವಾಗಬಾರದೆಂಬ ಉದ್ದೆಶದಿಂದ ಸರಕಾರ ಕೈಗೊಂಡ ಕ್ರಮ ಇದು. ಹಾಗಂತ ಚಿತ್ರದ ನೈಜತೆಗೆ ಧಕ್ಕೆ ಸಹ ಆಗುವ ಹಾಗಿಲ್ಲ, ಆದ್ದರಿಂದಲೇ ಸರಕಾರ ಅನೇಕ ಪದಗಳ ಅಥವಾ ದೃಷ್ಯಗಳ ವಿಷಯದಲ್ಲಿ ರೂಲ್ಸು ಮಾಡಿಲ್ಲ. ಗೈಡ್ ಲೈನ್ ಮಾತ್ರ ಮಾಡಿದೆ. ಅಂದರೆ ಪದ ಪ್ರಯೊಗದ ಪರಿಣಾಮ ನೊಡಿಕೊಂಡು ಅದನ್ನು ಬಿಡಬೇಕೊ ಬೇಡವೊ ಎಂಬುದನ್ನು ಮಂಡಳಿ ನಿರ್ಧರಿಸಬೇಕು. ಇದಕ್ಕೆ ಭಾಷಾಜ್ನಾನ, ಅನುಭವ ಬಹಳ ಮುಖ್ಯ. ಇಂದಿನ ಅಧಿಕಾರಿಗೆ ಅದಿಲ್ಲ ಎನ್ನುವುದು ಸದ್ಯಕ್ಕೆ ನಮ್ಮ ಪಾಲಿನ ದುರಂತ. 

ಒಂದು ಚಿತ್ರದಲ್ಲಿ ದೇವೇಗೌಡರನ್ನೂ ಮತ್ತೊಂದು ಚಿತ್ರದಲ್ಲಿ ಎಡೆಯೂರಪ್ಪನವರನ್ನೂ ಅವಮಾನಿಸಲಾಗಿತ್ತು, ಮತ್ತೊಂದು ಚಿತ್ರದಲ್ಲಿ ನಟ ಗಣೇಶರನ್ನೂ ಅವಮಾನಿಸಲಾಗಿತ್ತು. ಒಂದು ಕಡೆ ಸಿದ್ರಾಮಯ್ಯನವರನ್ನೂ ಸಹ ಪರೋಕ್ಷವಾಗಿ ಕಾಲೆಳೆಯಲಾಗಿತ್ತು. ಅಂಬೇಡ್ಕರ್ ಅವರನ್ನೂ ಸಹ ಅವಮಾನಿಸಿದ್ದಿದೆ. ಮಹಿಳೆಯರ ಅಂಗಾಂಗಳ ಬಗ್ಗೆ ಅವಹೇಳನ ಮಾಡಿದ ಚಿತ್ರಗಳೂ ಸಹ ಬಂದು ಹೋಗಿವೆ. ಇತಿಹಾಸ ತಿರುಚಿದ ಚಿತ್ರಗಳೂ ಸಹ ನಾನು ನೋಡಿದ್ದೇನೆ. ಇಂಥದ್ದಕ್ಕೆಲ್ಲಾ ಕತ್ತರಿ ಪ್ರಯೊಗ ಮಾಡಿ ಚಿತ್ರದಿಂದ ಅವನ್ನೆಲ್ಲಾ ತೆಗೆದು ಹಾಕಿದ್ದೇವೆ. ನನ್ನ ಆರು ವರ್ಷದ ಜರ್ನಿಯಲ್ಲಿ ಒಂದು ಚಲನ ಚಿತ್ರವನ್ನು ಕೆಲವೇ ಕೆಲವು ನಿರ್ಮಾಪಕರು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂದು ನೋಡಿ ‘ಥ್ಯಾಂಕ್ ಗಾಡ್! ಸೆನ್ಸಾರ್ ಮಂಡಳಿ ಅನ್ನೊದು ಇರೊದರಿಂದ ಇದ್ಯಾವದೂ ಆಚೆಗೆ ಬರದೆ ಹೊಯ್ತು’ ಎಂದು ಸಮಾಧಾನ ಪಟ್ಟುಕೊಂಡಿದ್ದೇನೆ. ಚಿತ್ರರಂಗಕ್ಕೆ ಸೆನ್ಸಾರ್ ಬೋರ್ಡ ತುಂಬಾ ಮುಖ್ಯ. ಇಲ್ಲದೆ ಹೋದಲ್ಲಿ ಹಣ ಕೊಟ್ಟ ಪ್ರೇಕ್ಷಕ ಮನೊರಂಜನೆಗಿಂತಾ ಮನೊ ವಿಕಲ್ಪಕ್ಕೆ ತುತ್ತಾಗಿ ಥೇಟರಿನಿಂದ ಹೊರಬರುವ ಸಾದ್ಯತೆ ಹೆಚ್ಚು. ‘ಹಣ ಹಾಕುವ ನಿರ್ಮಾಪಕನಿಗೆ ಅನ್ಯಾಯ ಎಸಗಬಾರದು,’ ‘ಹಣ ಹಾಕಿದ ನಿರ್ಮಾಪಕ ಎಲ್ಲಿ ಹೊಗ್ಬೇಕು’ ಎನ್ನುವ ಪದಗಳನ್ನ ಬಳಸಿ ಸೆನ್ಸಾರ್ ಬೋರ್ಡನ್ನು ನಿಂದಿಸುವುದನ್ನು ಬಿಟ್ಟು ಒಬ್ಬ ನಿರ್ಮಾಪಕನಿಂದ ಮತ್ತೊಬ್ಬ ನಿರ್ಮಾಪಕನಿಗೆ ಅನ್ಯಾಯ ಆಗೊದನ್ನ ತಪ್ಪಿಸುತ್ತಿರುವ ಸೆನ್ಸಾರ್ ಬೋರ್ಡನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಚಿತ್ರರಂಗದ ಜನ ಮಾಡಬೇಕು. 

ಹಾಗಂತ ಸೆನ್ಸಾರ್ ಬೋರ್ಡಿನಲ್ಲಿ ಎಲ್ಲೂವೂ ಸರಿಯಾಗಿದೆ ಎನ್ನಲಾಗದು, ಕೆಲವು ಪದಗಳಿಗೆ ಕತ್ತರಿ ಪ್ರಯೊಗ ಅನಾವಷ್ಯಕ. ಹಳ್ಳಿ ಸೊಗಡಿನ ಗ್ರಾಮೀಣ ಬಾಷೆಯ ಚಿತ್ರಗಳಲ್ಲಿ ನೈಜತೆ ಉಳಿಸಿಕೊಳ್ಳುವ ದೃಷ್ಟಿಯಿಂದ ಕೆಲವು ಪದಗಳನ್ನು ಬಿಡಬೇಕಾಗುತ್ತದೆ. ಆದರೆ ಅದನ್ನು ಚರ್ಚಿಸಿ ಸರಿಪಡಿಸಬಹುದು ಅಷ್ಟೆ. ಆ ಪ್ರಯತ್ನ ನಡೆದರೆ ಒಳ್ಳೆಯದು. ಓದಿದ್ದಕ್ಕೆ ಧನ್ಯವಾದಗಳು. 

[ಸೆನ್ಸಾರ್ ಬೋರ್ಡ ಅನ್ನುವ ಪದ ಈಗ ತೆಗೆದು ಹಾಕಲಾಗಿದ್ದು ಸಿಬಿಎಫ್ಸಿಹ ಎಂದು ಕರೆಯಲ್ಪಡುತ್ತದೆ. ಓದುವ ಅನೇಕರಿಗೆ ಇದರ ಮಾಹಿತಿ ಇಲ್ಲದೆ ಇರುವುದರಿಂದ ನಾನು ಲೇಖನದ ಉದ್ದಕ್ಕೂ ಸೆನ್ಸಾರ್ ಬೋರ್ಡ ಎಂದೇ ಬಳಸಿದ್ದೇನೆ] 

Pls Note

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Also See

Censor Board Inside Story 2 - Writes SM Patil

Censor Board Inside Story - 1 Writes SM Patil

Censor certification Stops in Bengaluru? - Exclusive

Censor Officer's 6 Wrongs

Censor Chief Walks Out of Chamber

Kiragooru moves to KFCC on Monday

Protest Against Censor over Kiragoorina Mutes

Kiragoorina Gayyaligalu Movie Review - 4/5

We Never Asked for Apology - Censor RO

Did Censor Seek RGV's Apology? - Exclusive

Revising Committee clears 3Bittawaru Oorige Doddawaru

Anti Superstition Film Denied Censor Certificate - Exclusive

Mumbai Censor Doors Closed For Kannada - Exclusive

Kannada Films Affected With Censor New Rules - Exclusive

Censor Guidelines