ಹಿಂದೆ ಸಿ.ಆರ್, ಚಂದ್ರಶೇಖರ್, ನಾಗರಾಜ್, ನಾಗೇಂದ್ರ ಸ್ವಾಮಿಯಂಥಾ ಸಾಹಿತ್ಯಾಸಕ್ತರು, ಕನ್ನಡವನ್ನು ಸ್ಪಷ್ಟವಾಗಿ ಬಲ್ಲವರು, ನಮ್ಮ ನಾಡಿನ ಪ್ರಾದೇಶಿಕ ಸಂಸ್ಕøತಿ, ಸಂಸ್ಕಾರ, ಪರಂಪರೆಯ ಜ್ನಾನವಿದ್ದವರು ಅಧಿಕಾರಿಗಳಾಗಿ ಬಂದು ಸೆನ್ಸಾರ್ ಬೋರ್ಡಿನ ಘನತೆ ಗೌರವ ಹೆಚ್ಚಿಸಿದ ಈ ಹುದ್ದೆಗೆ ಅದ್ಯಾವುದರ ಗಂಧ ಗಾಳಿಯೂ ಇಲ್ಲದೆ ಬಂದ ನತಾಷಾ ಊಟ ಊಟವೇ ತಿಥಿಯದಾದ್ರೇನು, ಮದ್ವೆಯದ್ದಾದರೇನು ಎಲ್ಲಾ ಒಂದೇ ಕೂತು ತಿಂದೆದ್ದು ಹೊಗಿ ಎಂಬಂತೆ ವರ್ತಿಸತೊಡಗಿದ್ದು ಚಿತ್ರರಂಗದ ಮಂದಿಯ ಹುಬ್ಬೇರಿಸುತ್ತಿದೆ.
Censor Board Inside Story - 1 Writes SM Patil
ಸಿರಗೂರಿನ ಗಯ್ಯಾಳಿಗಳು ಎಂಬ ಚಿತ್ರಕ್ಕೆ ಸರ್ಟೀಫಿಕೇಟನ್ನು ನೀಡಿ ಗಯ್ಯಾಳಿಗಳು ಅಂದ್ರೇನೆಂದು ಇನ್ನೂ ತೆಲೆ ಕೆರೆದುಕೊಳ್ಳುತ್ತಿರುವ ನತಾಷಾಗೆ ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಮೆಡಂ ಅದು ಪೂರ್ಣಚೆಂದ್ರ ತೇಜಸ್ವಿಯವರ ಕಾದಂಬರಿ ಎಂದಾಗ ಇನ್ನೂ ಗಾಭರಿಯಾಗಿ ಇವಳು ಯಾರದ್ದೊ ಅಂಕಲ್ ಇನ್ಫ್ಲು ಯೆನ್ಸ್ ಬೇರೆ ಯೂಸ್ ಮಾಡುತ್ತಿದ್ದಾಳೆಂದು ಕೋಪಿಸಿಕೊಂಡು ‘ನೋ ಡಿಸ್ಕಶನ್’ ಎಂದುತ್ತರಿಸಿ ಎದ್ದು ಹೊಗಿದ್ದಾಗಿದೆ. ಕೆರಳಿ ಕೆಂಡಾಮಂಡಲವಾದ ಜನ ಈಗ ಚಡ್ಡಿ ತೋರಿಸುವ ತೀರ್ಮಾನ ಮಾಡಿದ್ದೂ ಆಗಿದೆ!
ಇಷ್ಟೆಲ್ಲಾ ನಾನು ಬರೆಯುತ್ತಿರುವುದಕ್ಕೆ ಕಾರಣ ನಾನು, 2008 ರಿಂದ 2010ರ ವರೆಗೆ ಮತ್ತು 2012 ರಿಂದ 2016ರ ವರೆಗೆ ಸುಮಾರು ಆರು ವರ್ಷಗಳು ಇದೇ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯನಾಗಿದ್ದೆ.
ಈ ಆರು ವರ್ಷಗಳಲ್ಲಿ ಮೂರು ಉತ್ತಮ ಅಧಿಕಾರಿಗಳನ್ನು ಕಂಡ ನನಗೆ ಈ ನತಾಷಾ ವಿಚಿತ್ರ ಅಧಿಕಾರಿಯಾಗಿ ಗೊಚರಿಸಿದ್ದು ಅದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ.
ಹೊದವರ್ಷ 2015ರ ಡಿಸೆಂಬರ್ 9 ನೇ ತಾರೀಖಿಗೆ ಬಂದ ಈ ಸೌಮ್ಯ ಮುಖದ ಅಧಿಕಾರಿ ನನ್ನಲ್ಲಿ ಅಪಾರ ಗೌರವ ಹುಟ್ಟು ಹಾಕಿದ್ದು ಸತ್ಯ. ‘ಮೇಡಂ ಸಂಭಾವಿತೆ’ ಎಂಬ ಭಾವನೆ ಹುಟ್ಟುವಷ್ಟರಲ್ಲೇ ಕನ್ನಡವೇ ಗೊತ್ತಿಲ್ಲ ಎಂಬ ಗುಟ್ಟು ಗೊತ್ತಾಗಿ ಆ ಭಾವನೆ ಹಾಗೇ ಹೊಗೆ ಹಾಕಿಕೊಂಡಿದ್ದೂ ಅಷ್ಟೇ ದೊಡ್ಡ ಸತ್ಯ!
ಅದು ಡಿಸೆಂಬರ್. ಪ್ರತೀ ವರ್ಷದಂತೆ ಆ ತಿಂಗಳೂ ಸೆನ್ಸಾರ್ ಮಾಡಬೇಕಾದ ಚಿತ್ರಗಳ ಸಂಖ್ಯ 50 ದಾಟಿತ್ತು. ಅದೇ ವರ್ಷದ ಸರ್ಟಿಫಿಕೇಟನ್ನು ತೆಗೆದುಕೊಳ್ಳಲು ನಿರ್ಮಾಪಕರು ಮುಗಿಬಿದ್ದಿದ್ದರು. ಗಾಭರಿಯಾದ ಮೆಡಂ, ದಿನವೊಂದಕ್ಕೆ ಐದು ಚಿತ್ರ ವೀಕ್ಷಣೆ ಅಸಾಧ್ಯ ಎಂದು ಹೆದರಿ ಕೆಲವಕ್ಕೆ ತಾವು ಮತ್ತು ಇನ್ನು ಕೆಲವು ಚಿತ್ರಗಳಿಗೆ ಕೇವಲ ಸದಸ್ಯರುಗಳನ್ನು ಕಳಿಸುವುದರ ಮುಖಾಂತರ ಸೆನ್ಸಾರ್ ಮಾಡಿ ಕೈ ತೊಳೆದುಕೊಂಡರು. ಇದೂ ಸಹ ಸೆನ್ಸಾರ್ ಮಂಡಳಿಯ ಕಾರ್ಯ ವೈಖರಿಗೆ ವಿರೋಧವಾಗಿದ್ದು ಪ್ರಶ್ನಿಸುವವರಿಲ್ಲದೆ ಮೆಡಂ ಪಾರಾದರು!
ಮಂಡಳಿ ಸದಸ್ಯರು ಯಾರೊಬ್ಬರೂ ಚಿತ್ರದ ನಿರ್ಮಾಪಕ ನಿರ್ದೇಶಕರ ಜೊತೆಗೆ ಚಿತ್ರದ ಬಗ್ಗೆ ಚೆರ್ಚಿಸುವ ಹಾಗಿಲ್ಲ. ಮೆಡಂಗೆ ಕನ್ನಡ ಬರದ ಕಾರಣ, ಎಷ್ಟೊ ನಿರ್ಮಾಪಕ, ನಿರ್ದೇಶಕರಿಗೆ ಇಂಗ್ಲೀಶು ಬರದ ಕಾರಣ ಇದೀಗ ಚಿತ್ರ ವೀಕ್ಷೆಣೆಯ ನಂತರ ಅವರ ಜೊತೆಗೆ ಚರ್ಚಿಸುವ ಹೊಣೆ ಸದಸ್ಯರ ಮೇಲೆ ಬಿದ್ದಿದೆ. ಕತ್ತರಿಸುವ ದೃಷ್ಯಗಳ ಬಗ್ಗೆ, ನೀಡುವ ಸರ್ಟಿಫಿಕೇಟಿನ ಬಗ್ಗೆ ಚಿತ್ರ ವೀಕ್ಷಣೆಯ ನಂತರ ಅಧಿಕಾರಿಯೇ ಸಂಬಂಧ ಪಟ್ಟ ನಿರ್ದೇಶಕ ನಿರ್ಮಾಪಕರಿಗೆ ತಿಳಿಸಬೇಕು. ಅವರ ಆಕ್ಷೇಪಣೆ ಆಲಿಸಿ, ಅವರ ವಾದ ಅರ್ಥೈಸಿಕೊಳ್ಳಬೇಕು. ಅದು ಸರಿ ಎನಿಸಿದಲ್ಲಿ ತಮ್ಮ ತೀರ್ಮಾನವನ್ನು ಬದಲಿಸಬೇಕು. ಇಲ್ಲವಾದಲ್ಲಿ ಅವರಿಗೆ ತಮ್ಮ ತೀರ್ಮಾನ ಮನವರಿಕೆ ಮಾಡಿಕೊಡಬೇಕು. ಇಲ್ಲೀಗ ಅದೆಲ್ಲಾ ನಿಂತು ಹೊಗಿದ್ದು ಕೊಟ್ಟದ್ನ ತಗೊಂಡು ಹೊಗಿ ಎಂದು ಹೇಳಿ ಕಳಿಸಲಾಗುತ್ತಿದೆ. ಅದರಿಂದಾಗ ಸದಸ್ಯರುಗಳಿಗೂ ನಿರ್ಮಾಪಕ ನಿರ್ದೇಶಕರುಗಳಿಗೂ ಜಟಾಪಟಿ ನಡೆಯುತ್ತಿದೆ. ಹಿಂದೆಂದೂ ಇಂಥಾ ಘಟನೆ ನಡೆದಿಲ್ಲ!
ಇದೆಲ್ಲಾ ನೋಡಿ ರೋಸಿದ ನಾನು ಗೌರವದಿಂದಲೇ ಹೇಳಿದ್ದೆ ‘ಮ್ಯಾಮ್ ಯಾಸ್ ಪಾಸಿಬಲ್ ಯಾಸ್ ಅರ್ಲಿ ಯೂ ಹ್ಯಾವ್ ಟು ಲರ್ನ್ ಟು ಸ್ಪೀಕ್ ಕನ್ನಡ. ಅದರ್ ವೈಸ್ ಇಟ್ ವಿಲ್ ಕ್ರಿಯೇಟ್ ಲಾಟ್ಸ್ ಆಫ್ ಪ್ರಾಬ್ಲಮ್ಸ್’ [ಮೆಡಂ, ಆದಷ್ಟು ಬೇಗ ನೀವು ಕನ್ನಡ ಮಾತಾಡುವುದನ್ನು ಕಲಿಯಿರಿ ಇಲ್ಲದಿದ್ದರೆ ಬಹಳಷ್ಟು ತೊಂದರೆಯಾಗುತ್ತದೆ] ಮೆಡಂ ಸಹ ಅದಕ್ಕೆ ‘ಎಸ್ ಎಸ್ ಐ ವಿಲ್’ ಅಂದಿದ್ದರು. ಆದದ್ದೇನು ಗೊತ್ತಾ? ನನಗೆ ಮತ್ತೆ ಕರೆಯಲೇ ಇಲ್ಲ. ತಿಂಗಳ ಬಳಿಕ ಅಚ್ಚರಿಗೊಂಡ ನಾನು ವಿಚಾರಿಸಿದಾಗ ಬಂದ ಉತ್ತರ ‘ಯೂ ಆರ್ ರಿಮೂವ್ಡ್’ ಅಂತ. ಎಲಾ ಇವಳ! ಎಂಬ ಕೋಪ ಭುಗಿಲೆದ್ದಿತ್ತು. ಹಿರಿಯ ಎಲ್ಲಾ ಸದಸ್ಯರನ್ನು ತೆಗೆದು ಹಾಕಲು ಮೇಲಿನಿಂದ ಆದೇಶ ಬಂದಿದೆ ಎಂದು ಹೇಳಿದ ಅವರ ಕ್ರಮವನ್ನು ವಿರೋಧಿಸಿದ ನಾನು ನನಗೆ ಮಾತಿನ ಮೂಲಕ ತಿಳಿಸಿದರೆ ನಡೆಯದು, ಲಿಖಿತ ಆದೇಶ ಕೊಡಿ ಅಥವಾ ತೋರಿಸಿ ಎಂದಾಗ ಆದೇಶ ಲಿಖಿತ ರೂಪದಲ್ಲಿ ನೀಡಿಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟು ಪಾರಾದರು. ಆಗಲೇ ನನಗೆ ಗೊತ್ತಾಗಿದ್ದು ಇದೇ ರೀತಿ ನತಾಷಾ ಒಟ್ಟು ಆರು ಜನ ಸದಸ್ಯರನ್ನು ತೆಗೆದು ಹಾಕಿದ್ದಾರೆ ಎಂಬ ವಿಷಯ.
(To be Continued)
Pls Note
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.
Also See
Censor Board Inside Story - 1 Writes SM Patil
Censor certification Stops in Bengaluru? - Exclusive
Censor Chief Walks Out of Chamber
Kiragooru moves to KFCC on Monday
Protest Against Censor over Kiragoorina Mutes
Kiragoorina Gayyaligalu Movie Review - 4/5
We Never Asked for Apology - Censor RO
Did Censor Seek RGV's Apology? - Exclusive
Revising Committee clears 3Bittawaru Oorige Doddawaru
Anti Superstition Film Denied Censor Certificate - Exclusive
Mumbai Censor Doors Closed For Kannada - Exclusive